ಮಡಿಕೇರಿ ಆ.೧೮ : ಕೊಡಗು ಜಿಲ್ಲೆಯಲ್ಲಿ ಆಮ್‌ಆದ್ಮಿ ಪಾರ್ಟಿಯ ತಾಲೂಕುವಾರು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಮಟ್ಟದ ಕೋರ್ ಕಮಿಟಿಯನ್ನು ರಚಿಸಲಾಗಿದ್ದು, ಜಿಲ್ಲಾ ಸಂಯೋಜಕರಾಗಿ ಹೆಚ್.ಬಿ.ಪ್ರಥ್ವಿ ಆಯ್ಕೆಯಾಗಿದ್ದಾರೆ.
ನಗರದ ಚಿತ್ರ ಹೊಟೇಲ್ ಸಭಾಂಗಣದಲ್ಲಿ ನಡೆದ ಪಕ್ಷದ ಜಿಲ್ಲಾ ಮಟ್ಟದ ಸಭೆಯಲ್ಲಿ ನೂತನ ಉಸ್ತುವಾರಿ ಗಳನ್ನು ಆಯ್ಕೆ ಮಾಡಲಾಯಿತು. ಮಡಿಕೇರಿ ತಾಲೂಕು ಉಸ್ತುವಾರಿ ಯಾಗಿ ಹೆಚ್.ಜಿ. ಬಾಲಸುಬ್ರಮಣ್ಯ, ವೀರಾಜಪೇಟೆ ಕೋಳಿಬೈಲು ಚಿಣ್ಣಪ್ಪ ನಗರದ ಚಿತ್ರ ಹೊಟೇಲ್ ಸಭಾಂಗಣದಲ್ಲಿ ನಡೆದ ಪಕ್ಷದ ಜಿಲ್ಲಾ ಮಟ್ಟದ ಸಭೆಯಲ್ಲಿ ನೂತನ ಉಸ್ತುವಾರಿ ಗಳನ್ನು ಆಯ್ಕೆ ಮಾಡಲಾಯಿತು. ಮಡಿಕೇರಿ ತಾಲೂಕು ಉಸ್ತುವಾರಿ ಯಾಗಿ ಹೆಚ್.ಜಿ. ಬಾಲಸುಬ್ರಮಣ್ಯ, ವೀರಾಜಪೇಟೆ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್, ಸೋಮವಾರಪೇಟೆ ಎಸ್.ಎಂ. ಬೆಳ್ಳಿಯಪ್ಪ ಕಿರಗಂದೂರು, ಕುಶಾಲನಗರ ಎಂ.ಆರ್. ಮಂಜುನಾಥ್ ಹಾಗೂ ಪೊನ್ನಂಪೇಟೆ ತಾಲೂಕು ಉಸ್ತುವಾರಿಯಾಗಿ ಮುಕ್ಕಾಟಿರ ಅಪ್ಪಯ್ಯ ಆಯ್ಕೆಯಾಗಿದ್ದಾರೆ. ಮುಂಬರುವ ಜಿ.ಪಂ ಮತ್ತು ತಾ.ಪಂ. ಚುನಾವಣೆ ಯಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗು ವುದೆಂದು ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿಗಳಾದ ಎಸ್.ಬಿ. ಉದಯ ಕುಮಾರ್ ಹಾಗೂ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲೆಯ ೫ ತಾಲೂಕುಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.