ಮಡಿಕೇರಿ, ಆ. ೧೮: ಮಾನಭಂಗ ಯತ್ನ ಮತ್ತು ಜಾತಿ ನಿಂದನೆ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಮೂವರು ಆರೋಪಿಗಳ ವಿರುದ್ಧ ನಾಪೋಕ್ಲು ಪೊಲೀಸರು ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದ್ದು, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಕುಂಬಳದಾಳು ಗ್ರಾಮದ ಹರೀಶ, ಪೊನ್ನಪ್ಪ ಹಾಗೂ ವಿದ್ಯಾ ಎಂಬವರೇ ಖುಲಾಸೆಗೊಂಡವರು. ಇವರುಗಳ ವಿರುದ್ಧ ಮೂರ್ನಾಡಿನ ಹೆಚ್.ಟಿ. ರಾಜು ಎಂಬವರು ಜಾತಿನಿಂದನೆ ಹಾಗೂ ಮಾನಭಂಗ ಯತ್ನ ಆರೋಪದಡಿ ನಾಪೋಕ್ಲು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮುತ್ತಾರ್‌ಮುಡಿ ಗ್ರಾಮ ನಿವಾಸಿ, ಶಿವಪ್ಪ ಎಂಬವರು ಮುತ್ತಾರ್‌ಮುಡಿ ಮತ್ತು ಕುಂಬಳದಾಳು ಗ್ರಾಮದಲ್ಲಿ ಕಾಫಿ ತೋಟ ಹೊಂದಿದ್ದು, ಅವರ ಪತ್ನಿ ಜಯಂತಿ ಎಂಬವರು ತೋಟ ನಿರ್ವಹಿಸುತ್ತಿದ್ದರು. ಜಯಂತಿ ಅವರು ೨೦೨೦ರ ಡಿಸೆಂಬರ್ ೨೫ ರಂದು ಮೂರ್ನಾಡಿನ ಪರಿಚಿತ ಕಾರ್ಮಿಕರಾದ ಹೆಚ್.ಟಿ. ರಾಜು, ಮುತ್ತಿ, ಚೆಂಗು ಹಾಗೂ ಇತರ ೯ ಮಂದಿಯನ್ನು ಕುಂಬಳದಾಳು ಗ್ರಾಮದ ಕಾಫಿ ತೋಟದಲ್ಲಿ ಕಾಫಿ ಹಣ್ಣು ಕುಯ್ಲು ಮಾಡಲು ಕರೆದುಕೊಂಡು ತೆರಳಿದ್ದರು.
ಈ ವೇಳೆ ಪೊನ್ನಪ್ಪ, ಹರೀಶ ಮತ್ತು ವಿದ್ಯಾ ಅವರುಗಳು ಜಯಂತಿ ಅವರನ್ನು ಎಳೆದಾಡಿ ಮಾನಭಂಗ ಯತ್ನ ಮತ್ತು ಇನ್ನಿತರ ಕಾರ್ಮಿಕರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಜಾತಿಯ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ೨೬.೧೨.೨೦೨೦ ರಂದು ಕಾರ್ಮಿಕ ಹೆಚ್.ಟಿ. ರಾಜು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ೩ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ೪೪೭,೩೪೧, ೫೦೪, ೫೦೬,೩೫೪(ಬಿ), ಆರ್/ಡಬ್ಲುö್ಯ ೩೪, ೩ ಇನ್ನಿತರ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಮಡಿಕೇರಿಯ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಬಳಿಕ ೩ ಮಂದಿ ಆಪಾದಿತರು ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯನ್ನು ವಜಾಗೊಳಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್, ವಾದ ಪ್ರತಿವಾದ ಆಲಿಸಿ ಜಾತಿ ನಿಂದನೆ ಮತ್ತು ಮಹಿಳೆ ಮೇಲಿನ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬAಧಿಸAತೆ ಸೂಕ್ತ ಸಾಕ್ಷಾö್ಯಧಾರ ಇಲ್ಲದ ಕಾರಣ ದೋಷರೋಪಣಾ ಪಟ್ಟಿಯನ್ನು ವಜಾ ಮಾಡಿ ೩ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ಆರ್.ಕೆ. ಮಹದೇವ್ ವಕಾಲತು ವಹಿಸಿದ್ದರು.