ಮಡಿಕೇರಿ, ಆ. ೧೮: ಕುಶಾಲನಗರ ಸ್ಥಳೀಯ ಯೋಜನಾ ಪ್ರದೇಶದ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ ಕಲಂ ೬ರ ಪ್ರಕಾರ ಹಾಲಿ ಭೂ ಬಳಕೆ-೨೦೧೦ ನಕ್ಷೆಯನ್ನು ಕುಶಾಲನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಪ್ರಕಟಿಸಲಾಗಿದೆ.

ಹಾಲಿ ಭೂ ಬಳಕೆ-೨೦೧೦ ನಕ್ಷೆಯಲ್ಲಿ ಯಾವುದಾದರು ತಿದ್ದುಪಡಿಗಳಿದ್ದಲ್ಲಿ, ಈ ಪ್ರಕಟಣೆ ಹೊರಡಿಸಿದ ೩೦ ದಿನಗಳ ಒಳಗೆ ಲಿಖಿತ ಕೋರಿಕೆಯನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ಸದಸ್ಯ ಕಾರ್ಯದರ್ಶಿಗಳು, ಕುಶಾಲನಗರ ಯೋಜನಾ ಪ್ರಾಧಿಕಾರ, ಕುಶಾಲನಗರ ಇವರಿಗೆ ಸಲ್ಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ನಿಗದಿತ ಅವಧಿಯೊಳಗೆ ಸಲ್ಲಿಕೆಯಾಗುವ ಆಕ್ಷೇಪಣಾ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.