ಗೋಣಿಕೊಪ್ಪಲು, ಆ. ೧೮: ಕೊರೊನಾ ಸಂದರ್ಭ ಸಂಕಷ್ಟಕ್ಕೀಡಾಗಿದ್ದ ಕಿರುಗೂರು ಗ್ರಾಮ ಪಂಚಾಯಿತಿಯ ಮತ್ತೂರು ಗಿರಿಜನ ಕಾಲೋನಿಯ ಅರ್ಹ ಕುಟುಂಬ ಗಳಿಗೆ ಕೆ.ಪಿ.ಸಿ.ಸಿ.ಯ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ತಮ್ಮ ವೈಯಕ್ತಿಕ ಆಹಾರ ಕಿಟ್ ವಿತರಿಸಿದರು.
ಸಭಾಭವನದಲ್ಲಿ ಕಿರುಗೂರು ಜೋನಾಲ್ ಕಾಂಗ್ರೆಸ್‌ನ ಅಧ್ಯಕ್ಷ ಚೆಪ್ಪುಡೀರ ಬೋಪಣ್ಣ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮ ದಲ್ಲಿ ಕಿಟ್ ವಿತರಿಸಿ ಮಾತನಾಡಿದ ಪೊನ್ನಣ್ಣ, ಕೊರೊನಾ ಸಂದರ್ಭ ಅನೇಕ ಕುಟುಂಬಗಳು ಕಷ್ಟದಲ್ಲಿ ಸಿಲುಕಿವೆ. ಈ ಸಂದರ್ಭ ಕಾಂಗ್ರೆಸ್ ಪಕ್ಷ ಬಡವರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ರವಿ, ಮಾಜಿ ಸದಸ್ಯರಾದ ಗಿರೀಶ್, ವಿಶ್ವನಾಥ್ ಸೇರಿದಂತೆ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ತೀತಿರ ಧರ್ಮಜ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೇರ ಭಾರತಿ, ಮುಖಂಡರುಗಳಾದ ಕಡೇಮಾಡ ಕುಸುಮಾ ಜೋಯಪ್ಪ, ಮತ್ರಂಡ ದಿಲ್ಲು, ಕೊಲ್ಲಿರ ಬೋಪಣ್ಣ, ತೆರೆಸ ವಿಕ್ಟರ್, ಮುಕ್ಕಾಟೀರ ಸಂದೀಪ್ ಮುಂತಾದವರು ಹಾಜರಿದ್ದರು.