ಶನಿವಾರಸಂತೆ, ಆ. ೧೮: ಶನಿವಾರಸಂತೆ ಸಮೀಪದ ಒಡೆಯನಪುರ ಗ್ರಾಮದ ಕೂಲಿ ಕಾರ್ಮಿಕ ಕೃಷ್ಣಪ್ಪ (೬೫) ತಮ್ಮ ಗ್ರಾಮದ ಕಾಡು ಜಾಗದಲ್ಲಿ ಮರದ ಕೊಂಬೆಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೃಷ್ಣಪ್ಪ ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಅಧಿಕ ಹಣ ಬೇಕಾಗುತ್ತದೆ ಎಂಬ ಚಿಂತೆಯಿAದ ಜಿಗುಪ್ಸೆಗೊಂಡು ತಾ. ೧೫ ರಂದು ಮನೆಯಿಂದ ಹೊರಗೆ ಹೋಗಿದ್ದಾರೆ. ಹೋದವರು ಮನೆಗೆ ವಾಪಾಸು ಬಾರದೆ ಇದ್ದುದರಿಂದ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಮಂಗಳವಾರ ಸಂಜೆ ಒಡೆಯನಪುರದ ಕಾಡು ಜಾಗದಲ್ಲಿ ಮರದ ಕೊಂಬೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ತೆಯಾಗಿದೆ. ಮಗ ಮಧು ನೀಡಿದ ಪುಕಾರಿನ ಮೇರೆಗೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಎಸ್ಐ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.