ಸಿದ್ದಾಪುರ, ಆ. ೧೭ : ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆಯಲ್ಲಿ ಶಾಸಕ ಬೋಪಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಆದಿವಾಸಿಗಳು ಅರಣ್ಯದಲ್ಲಿ ತಲಾತಲಾಂತರಗಳಿAದ ವಾಸ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಈ ಜನಾಂಗಕ್ಕೆ ನೀಡಿರುವ ಹಕ್ಕುಪತ್ರವನ್ನು ಬದಲಾಯಿಸಿ ವೈಯಕ್ತಿಕ ಆರ್.ಟಿ.ಸಿ ನೀಡಬೇಕು ಹಾಗೂ ಅರಣ್ಯದೊಳಗೆ ಇರುವ ಆದಿವಾಸಿಗಳಿಗೆ ಅರಣ್ಯ ಇಲಾಖಾಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಅದನ್ನು ನಿಲ್ಲಿಸಬೇಕೆಂದರು. ಆದಿವಾಸಿಗಳಿಗೆ ಐ.ಟಿ.ಡಿ.ಪಿ ಇಲಾಖೆಯ ಮುಖಾಂತರ ನಿರ್ಮಾಣ ಮಾಡುತ್ತಿರುವ ಮನೆಗಳ ಫಲಾನುಭವಿಗಳಿಗೆ ನೇರವಾಗಿ ಅನುದಾನ ನೀಡಬೇಕು. ಹಾಗೂ ಸರ್ಕಾರದಿಂದ ಆದಿವಾಸಿಗಳಿಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಬೇಕೆಂದರು. ದಿಡ್ಡಳ್ಳಿಯಲ್ಲಿರುವ ಸರ್ಕಾರಿ ಆಶ್ರಮ ಶಾಲೆಯಲ್ಲಿ ಪ್ರೌಢಶಾಲೆ ಪ್ರಾರಂಭಿಸಬೇಕೆAದರು. ಇದಲ್ಲದೇ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಪ್ಪಾಜಿರವರು ಶಾಸಕ ಕೆ.ಜಿ ಬೋಪಯ್ಯ ರವರಿಗೆ ಮನವಿ ಪತ್ರ ನೀಡಿದರು. ಮನವಿ ಪತ್ರ ಸ್ವೀಕರಿಸಿದ ಶಾಸಕ ಬೋಪಯ್ಯ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಚೆನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಸದಸ್ಯ ಮೇಕೇರಿರ ಅರುಣ್ ಹಾಗೂ ಇನ್ನಿತರರು ಹಾಜರಿದ್ದರು.