ಮಡಿಕೇರಿ, ಆ. ೧೭: ಮಡಿಕೇರಿಯ ರೋಟರಿ ಸಂಸ್ಥೆಯ ವತಿಯಿಂದ ನಗರದ ರೋಟರಿ ಭವನದಲ್ಲಿ ಅಳವಡಿಸಿದ ಕೋವಿಡ್ ಲಸಿಕಾ ಸಂದೇಶ ಫಲಕವನ್ನು ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಇತ್ತೀಚೆಗೆ ಉದ್ಘಾಟಿಸಿದರು. ರೋಟರಿ ಮಡಿಕೇರಿ ಅಧ್ಯಕ್ಷ ಎನ್.ಡಿ. ಅಚ್ಚಯ್ಯ, ಕಾರ್ಯದರ್ಶಿ ಲಲಿತಾ ರಾಘವನ್, ಮಾಜಿ ಜಿಲ್ಲಾ ಗವರ್ನರ್ಗಳಾದ ಡಾ. ರವಿ ಅಪ್ಪಾಜಿ ಮತ್ತು ಸುರೇಶ್ ಚಂಗಪ್ಪ, ರೋಟರಿ ಮಡಿಕೇರಿಯ ಸರ್ವ ಸದಸ್ಯರೂ ಭಾಗವಹಿಸಿದ್ದರು.