ಕರಿಕೆ, ಆ. ೧೭: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆ-ಚೆಂಬೇರಿ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಭಾಜಪ ಶಕ್ತಿ ಕೇಂದ್ರ ಪ್ರಮುಖ ಹೊಸಮನೆ ಹರೀಶ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ. ನಾರಾಯಣ ಗ್ರಾಮೀಣ ಪ್ರದೇಶವಾದ ಗ್ರಾಮದಲ್ಲಿ ಪಾಸಿಟಿವ್ ಕಂಡು ಬಂದಲ್ಲಿ ಮಡಿಕೇರಿಗೆ ಕರೆದೊಯುತ್ತಿದ್ದು, ಕರಿಕೆಯಲ್ಲಿ ಕ್ವಾರಂಟೈನ್ ಮಾಡುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಪಂಚಾಯಿತಿ ಟಾಸ್ಕ್ಫೋರ್ಸ್ ಸಭೆಯಲ್ಲಿ ನಿರ್ಣಯ ಕೈಗೊಂಡು ಕಳುಹಿಸುವಂತೆ ತಿಳಿಸಿದರು. ಅಲ್ಲದೇ ಗ್ರಾಮವನ್ನು ಶೇ. ನೂರgಷ್ಟು ವ್ಯಾಕ್ಸಿನೇಷನ್ ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಆರೋಗ್ಯ ವಿಸ್ತರಣಾ ಘಟಕಕ್ಕೆ ಭೇಟಿ ನೀಡಿದರು. ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
*ಕೋವಿಡ್ ಸಂಬAಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಸಂಪಾಜೆ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲಿಸಿದರು.