ಕಣಿವೆ, ಆ. ೧೩: ಯಲಕ್ಕನೂರು ಹಾಗೂ ಸೀಗೆಹೊಸೂರು ವ್ಯಾಪ್ತಿಯಲ್ಲಿನ ಕಕ್ಕೆಹೊಳೆ ಅಚ್ಚುಕಟ್ಟು ಪ್ರದೇಶದ ಕೃಷಿಕರು ಭತ್ತದ ನಾಟಿ ಕಾರ್ಯ ಆರಂಭಿಸಿದ್ದಾರೆ. ಮಹಿಳೆಯರು ಭತ್ತದ ನಾಟಿಗೆ ಸಸಿಮಡಿಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.
ಮಳೆಯೂ ಬಿಡುವು ಕೊಟ್ಟದ್ದರಿಂದಾಗಿ ಗೀಗೀ ಪದಗಳನ್ನು ಹಾಡಿಕೊಂಡು ಸಂತಸದಿAದ ನಾಟಿ ಕಾರ್ಯ ನಡೆಸಲಾಗುತ್ತಿದೆ.