ಮಡಿಕೇರಿ, ಆ. ೧೪: ಕೊಡಗಿನವರಾದ ಚಿತ್ರತಾರೆ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರು ಅಭಿನಯಿಸಿರುವ ಚೊಚ್ಚಲ ಬೋಜ್ಪುರಿ ಭಾಷೆಯ ಚಲನಚಿತ್ರ ತಾ ೧೫ ರಂದು (ಇಂದು) ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಹರ್ಷಿಕಾ ಇದೀಗ ಬೋಜ್ಪುರಿ ಹೀರೋ ಪವನ್ ಸಿಂಗ್ ಜತೆ ‘ಹಮ್ ಹೈ ರಾಹಿ ಪ್ಯಾರ್ಕೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರ ಸಾಕಷ್ಟು ಹೆಸರು ಮಾಡಿದ್ದು, ಯಶಸ್ಸು ಕಾಣುವ ನಿರೀಕ್ಷೆ ಹೊಂದಲಾಗಿದೆ.