ಮಡಿಕೇರಿ, ಆ. ೧೪: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ೨೦ ಕೋವಿಡ್ ವಾರಿಯರ್ಸ್ಗಳನ್ನು ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಸನ್ಮಾನಿಸಲಾಗುತ್ತದೆ.
ಜಿಲ್ಲಾಡಳಿತ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ ವೈದ್ಯರಾದ ಡಾ. ಅಬ್ದುಲ್ ಅಜೀಜ್, ಡಾ. ಪ್ರದೀಪ್, ಡಾ. ನಿಶಾದ್, ಡಾ. ಗಾಯಿತ್ರಿ, ಡಾ. ಕಸ್ತೂರಿ, ಡಾ. ವೆಂಕಟಕೃಷ್ಣ ಭಟ್, ಡಾ. ಶ್ರಾವಣಿ, ಡಾ. ಪಾರ್ವತಿ, ಶುಶ್ರೂಷಕಿಯರಾದ ವೀಣಾ, ಕುಸುಮಾ, ಪ್ರೇಮಾ, ಮರಿಯ, ಪ್ಯಾರ ಮೆಡಿಕಲ್ ಸಿಬ್ಬಂದಿಗಳಾದ ಪಾವನ, ಕೃಷ್ಣ, ಧನಂಜಯ, ದಿಲೀಪ್, ಕೃಪ, ಡಿ ಗ್ರೂಪ್ ಸಿಬ್ಬಂದಿಗಳಾದ ಬೆಳ್ಯಪ್ಪ, ನವೀನ್ ಅವರುಗಳನ್ನು ಸನ್ಮಾನಿಸಲಾಗುತ್ತದೆ.