ರಾಜ್ಯದಲ್ಲಿ ಕೊರೊನಾಗೆ ೨೨ ಬಲಿ

ಬೆಂಗಳೂರು, ಆ. ೧೩: ರಾಜ್ಯದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದು, ಮಹಾಮಾರಿಗೆ ಶುಕ್ರವಾರ ಒಂದೇ ದಿನ ೨೨ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೬,೯೩೩ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ೧,೬೬೯ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೨೬,೪೦೧ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೪೫೫ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೨,೨೨೦ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ಐವರು ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ೧೬೭೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೬೬,೭೩೯ಕ್ಕೆ ಏರಿಕೆಯಾಗಿದೆ. ಇನ್ನು ೨೨,೭೦೩ ಸಕ್ರಿಯ ಪ್ರಕರಣಗಳಿವೆ.

ಮುಂದಿನ ವರ್ಷ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ನಿಷೇಧ

ನವದೆಹಲಿ, ಆ. ೧೩: ಪ್ಲೇಟ್‌ಗಳು, ಕಪ್‌ಗಳು, ಸಿಗರೇಟ್ ಪ್ಯಾಕೇಟ್ ಸೇರಿದಂತೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳು, ಅವುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೊರಡಿಸಲಾಗಿರುವ ಅಧಿಸೂಚನೆ ಪ್ರಕಾರ, ಸೆಪ್ಟೆಂಬರ್ ೩೦, ೨೦೨೧ ರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಾತ್ರವನ್ನು ೫೦ ಮೈಕ್ರಾನ್‌ಗಳಿಂದ ೭೫ ಮೈಕ್ರಾನ್‌ಗಳಿಗೆ ಹಾಗೂ ಡಿಸೆಂಬರ್ ೩೧, ೨೦೨೨ ರಿಂದ ೧೨೦ ಮೈಕ್ರಾನ್‌ಗಳಿಗೆ ಹೆಚ್ಚಿಸಲಾಗಿದೆ. ಪಾಲಿಸ್ಟೆöÊರೀನ್ ಸೇರಿದಂತೆ ಏಕಬಳಕೆ ಪ್ಲಾಸ್ಟಿಕ್ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ಜುಲೈ ೧, ೨೦೨೨ರಿಂದ ನಿಷೇಧಿಸಲಾಗಿದೆ. ಬಲೂನ್‌ಗಳಿಗಾಗಿ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್ - ಕ್ರೀಮ್ ಕಡ್ಡಿಗಳು, ಪ್ಲೇಟ್‌ಗಳು, ಕಪ್‌ಗಳು, ಚಮಚ, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕೇಟ್ ಅಥವಾ ಪಿವಿಸಿ ಬ್ಯಾನರ್‌ಗಳು ೧೦೦ ಮೈಕ್ರಾನ್‌ಗಳಿಗಿಂತ ಕಡಿಮೆ ಇರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಕಾನೂನು ೨೦೧೬ರ ಪ್ರಕಾರ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳಲ್ಲಿ ಗುರುತಿಸಲಾಗದು, ಅದನ್ನು ತಯಾರಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರ ಜವಾಬ್ದಾರಿ ಮೂಲಕ ಸುಸ್ಥಿರ ಪರಿಸರದ ನಿಟ್ಟಿನಲ್ಲಿ ನಿರ್ವಹಣೆ ಮಾಡಬೇಕಾಗಿದೆ. ಇದರ ಪರಿಣಾಮಕಾರಿ ಅನುಷ್ಟಾನಕ್ಕೆ ತಿದ್ದುಪಡಿ ಕಾನೂನುಗಳ ಮೂಲಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪರಿಸರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮುಂಬೈನಲ್ಲಿ ಕೋವಿಡ್ ಡೆಲ್ಟಾ ಪ್ಲಸ್ ಸೋಂಕಿಗೆ ಮೊದಲ ಬಲಿ

ಮಹಾರಾಷ್ಟç, ಆ. ೧೩: ಸಂಭಾವ್ಯ ಕೊರೊನಾ ೩ನೇ ಅಲೆ ಹಾಗೂ ಕೋವಿಡ್ ಸೋಂಕು ದಿನನಿತ್ಯ ಹಾವು ಏಣಿ ಆಟ ಆಡುತ್ತಿರುವ ನಡುವಲ್ಲೇ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ವೈರಸ್‌ಗೆ ಮೊಟ್ಟ ಮೊದಲ ಬಲಿಯಾಗಿದೆ. ೬೩ ವರ್ಷದ ಮಹಿಳೆ ಡೆಲ್ಟಾ ಪ್ಲಸ್ ಕೋವಿಡ್ ಸೋಂಕಿನಿAದ ಸಾವಿಗೀಡಾಗಿದ್ದು, ಅವರು ೨ ಡೋಸ್ ಕೊರೊನಾ ಲಸಿಕೆಯನ್ನು ತೆಗೆದುಕೊಂಡಿದ್ದರಾದರೂ ಇನ್ನಿತರ ಆರೋಗ್ಯ ಸಂಬAಧಿ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕಳೆದ ತಿಂಗಳು ರತ್ನಗಿರಿಯ ೮೦ ವರ್ಷದ ಮಹಿಳೆ ಸಾವನ್ನಪ್ಪಿದ ನಂತರ ಇದು ಡೆಲ್ಟಾ ಪ್ಲಸ್‌ನಿಂದ ಮಹಾರಾಷ್ಟçದ ಎರಡನೇ ಸಾವಾಗಿದೆ ಎಂದು ವರದಿಗಳು ತಿಳಿಸಿವೆ. ಮುಂಬೈನ ನಾಗರಿಕ ಸಂಸ್ಥೆ ಬಿಎಂಸಿ (ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್) ಈ ಕುರಿತು ಮಾಹಿತಿ ನೀಡಿದೆ. ೬೩ ವರ್ಷದ ಮಹಿಳೆ ಜುಲೈ ೨೧ ರಂದು ಕೋವಿಡ್ ೧೯ ಪಾಸಿಟಿವ್‌ಗೆ ಒಳಗಾಗಿದ್ದರು. ಜುಲೈ ೨೭ ರಂದು ಸೋಂಕಿಗೆ ಬಲಿಯಾಗಿದ್ದರು. ಸೋಂಕಿನಿAದ ಮೃತಪಟ್ಟ ಮಹಿಳೆಗೆ ಕೋವಿಡ್ ಸೋಂಕಿನ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿತ್ತು. ಯಾವುದೇ ಟ್ರಾವೆಲಿಂಗ್ ಹಿಸ್ಟರಿ ಮಹಿಳೆಗೆ ಇಲ್ಲ. ಆದಾಗ್ಯೂ, ಮಹಿಳೆ ಕೆಲವು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಯ ಜೀನೋಮ್ ಸೀಕ್ವೆನ್ಸಿಂಗ್ ವರದಿಯನ್ನು ಇತ್ತೀಚೆಗೆ ಪಡೆದಿತ್ತು, ವರದಿಯ ಪ್ರಕಾರ, ಮೃತ ಮಹಿಳೆ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ಸೋಂಕಿಗೆ ಒಳಗಾಗಿದ್ದರು ಎಂದು ಸೂಚಿಸಿದೆ ಎಂದು ಬಿಎಂಸಿ ತಿಳಿಸಿದೆ.

ಅಫ್ಘಾನ್‌ನಲ್ಲಿ ತಾಲಿಬಾನ್ ಅಟ್ಟಹಾಸ

ಕಾಬುಲ್, ಆ. ೧೩: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು, ಉಗ್ರರ ದಾಳಿಯಿಂದಾಗಿ ಅಫ್ಘಾನಿಸ್ತಾನದ ಹೆರಾತ್ ನಲ್ಲಿ ಸರ್ಕಾರಿ ಅಧಿಕಾರಿಗಳೇ ಉಗ್ರರಿಗೆ ಶರಣಾಗಿದ್ದಾರೆ. ಈ ಕುರಿತಂತೆ ಅಫ್ಘಾನಿಸ್ತಾನದ ಟೋಲೋ ನ್ಯೂಸ್ ವರದಿ ಮಾಡಿದ್ದು, ಹೆರಾತ್ ಪ್ರಾಂತ್ಯದ ಸರ್ಕಾರಿ ಅಧಿಕಾರಿಗಳು, ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಮಾಜಿ ಮುಜಾಹಿದ್ದೀನ್ ನಾಯಕ ಮೊಹಮ್ಮದ್ ಇಸ್ಮಾಯಿಲ್ ಖಾನ್, ಆಂತರಿಕ ಭದ್ರತೆಯ ಉಪ ಮಂತ್ರಿ ಮತ್ತು ೨೦೭ ಜಾಫರ್ ಕಾರ್ಪ್ಸ್ ಕಮಾಂಡರ್‌ಗಳು ತಾಲಿಬಾನ್ ಉಗ್ರರಿಗೆ ಶರಣಾಗಿದ್ದಾರೆ. ನಿನ್ನೆಯಷ್ಟೇ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‌ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಆ ಮೂಲಕ ಅಫ್ಘಾನಿಸ್ತಾನದ ೩೪ ಪ್ರಾಂತೀಯ ರಾಜಧಾನಿಗಳ ಪೈಕಿ ೧೧ ರಾಜಧಾನಿಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡAತಾಗಿದೆ. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಅಮೇರಿಕಾ ಸರ್ಕಾರ ತನ್ನ ಕೊನೆಯ ಸೈನಿಕ ತುಕಡಿಯನ್ನು ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳು ಮತ್ತೆ ಅಟ್ಟಹಾಸ ಆರಂಭಿಸಿ ಕೇವಲ ೧೫ ದಿನಗಳ ಅಂತರದಲ್ಲಿ ತಾವು ಈ ಹಿಂದೆ ಹಿಡಿತ ಕಳೆದುಕೊಂಡಿದ್ದ ಪ್ರದೇಶಗಳ ಪೈಕಿ ಶೇ.೫೦ರಷ್ಟಕ್ಕೂ ಹೆಚ್ಚು ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡಿದೆ.