ಮಡಿಕೇರಿ, ಆ. ೧೪: ನಗರದ ಇಸಿಹೆಚ್‌ಎಸ್ ಪಾಲಿಕ್ಲಿನಿಕ್ ತಾ. ೧೯ ರಂದು ಮೊಹರಂ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಮತ್ತು ತಾ ೨೦ ಹಾಗೂ ೨೧ ರಂದು ವೈದ್ಯರು ಲಭ್ಯವಿರುವುದಿಲ್ಲ.

ಎಲ್ಲಾ ಮಾಜಿ ಸೈನಿಕರು ಮತ್ತು ಅವರ ಅವಲಂಭಿತರು ಹೊರಗಡೆಯಿಂದ ತೆಗೆದುಕೊಂಡ ಔಷಧಿಯ ಬಿಲ್ಲನ್ನು ಶೀಘ್ರ ತಂದುಕೊಡಬೇಕಾಗಿ ಮನವಿ ಮಾಡಿದೆ. ( ಜುಲೈ ೩೧ರ ತನಕ ತೆಗೆದ ಮಾತ್ರೆಯ ಬಿಲ್ಲುಗಳು) ಎಲ್ಲಾ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ನೀವು ತೆಗೆದುಕೊಂಡ ಕೋವಿಡ್ ೧೯ ವ್ಯಾಕ್ಸಿನ್‌ಗಳ ಮಾಹಿತಿಗಳನ್ನು ದೂರವಾಣಿ ಸಂಖ್ಯೆ: ೦೮೨೭೨- ೨೨೦೦೨೪, ೨೯೮೪೦೬ ಸಂಖ್ಯೆಗೆ ತಿಳಿಸಬೇಕೆಂದು ಕೋರಿದ್ದಾರೆ.