ಮಡಿಕೇರಿ, ಆ. ೧೪: ಜುಲೈ ೧೩ ರಂದು ಮುತ್ತಾರ್ಮುಡಿ ಗ್ರಾಮದ ಕೆ.ಕುಟ್ಟಪ್ಪ ಅವರ ತೋಟದಲ್ಲಿ ೬ ವರ್ಷ ವಯಸ್ಸಿನ ಕಮಲಿ ಎಂಬ ಬಾಲಕಿಯನ್ನು ಪೋಷಕರು ಬಿಟ್ಟು ಹೋಗಿದ್ದು, ಪೋಷಕರ ಅಥವಾ ಸಂಬAಧಿಕರ ಪತ್ತೆಗೆ ಸಹಕರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಸ್ತುತ ಬಾಲಕಿಯು ಮಡಿಕೇರಿಯ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ದಾಖಲಾಗಿದ್ದಾಳೆ. ಅವಳು ನೀಡಿರುವ ಮಾಹಿತಿ ಪ್ರಕಾರ ತಂದೆಯ ಹೆಸರು ಮಣಿ ಹಾಗೂ ತಾಯಿಯ ಹೆಸರು ಪ್ರೇಮ ಎಂದು ತಿಳಿದುಬಂದಿದೆ. ಸಿದ್ದಾಪುರ ಶಾಲೆಯಲ್ಲಿ ೨ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಬಾಲಕಿಯ ಪೋಷಕರ ಬಗ್ಗೆ ಮಾಹಿತಿ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.೦೮೨೭೨-೨೨೮೮೦೦ ಅಥವಾ ಮಕ್ಕಳ ಕಲ್ಯಾಣ ಸಮಿತಿ ದೂ.೦೮೨೭೨-೨೯೫೧೨೦ ಅನ್ನು ಸಂಪರ್ಕಿಸಬಹುದಾಗಿದೆ.