ಶನಿವಾರಸಂತೆ, ಆ. ೧೪: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಗ್ರಂಥಪಾಲಕಿ ಎಸ್.ಪಿ. ದಿವ್ಯಾ ಹಾಗೂ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಉದ್ಘಾಟಿಸಿದರು.
ನಂತರ ಎಸ್.ಪಿ. ದಿವ್ಯಾ ಮಾತನಾಡಿ, ಗ್ರಂಥಪಾಲಕರ ದಿನದ ಮಹತ್ವವನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಸದಸ್ಯೆ ಎಸ್.ಪಿ. ಭಾಗ್ಯಾ ಮಾತನಾಡಿ, ಗ್ರಂಥಾಲಯವನ್ನು ಡಿಜಿಟಲ್ ಮಾಡುವುದಾಗಿ ಭರವಸೆ ನೀಡಿದರು. ಪಂಚಾಯಿತಿ ಉಪಾಧ್ಯಕ್ಷ ನಿತಿನ್, ಸದಸ್ಯ ದೇವರಾಜ್, ಪ್ರಮುಖರಾದ ಅಶ್ವಿನಿ, ಮೀನಾಕ್ಷಿ, ಅನುಷಾ, ಧನು, ತಮ್ಮೇಗೌಡ ಉಪಸ್ಥಿತರಿದ್ದರು.