ಮಡಿಕೇರಿ, ಆ. ೧೪: ಕೊರೊನಾ ವಾರಾಂತ್ಯ ಕರ್ಫ್ಯೂ ನಡುವೆ ಇಂದು ಅಸ್ಸಾಂನ ಸುಮಾರು ೩೦ ಕಾರ್ಮಿಕರು ಕಾಣಿಸಿಕೊಂಡಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಮೇಕೇರಿ ರಸ್ತೆಯಲ್ಲಿ ತೆರಳುತ್ತಿದ್ದ ಕಾರ್ಮಿಕರನ್ನು ಸ್ಥಳೀಯ ಕೆಲವರು ಪ್ರಶ್ನಿಸಿದಾಗ ಅವರುಗಳು ಒಂದು ಬಾರಿ ಮಾತ್ರ ವ್ಯಾಕ್ಸಿನ್ ಪಡೆದಿರುವುದು ತಿಳಿದು ಬಂದಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಇಲ್ಲಿಗೆ ಹೇಗೆ ಬಂದರು? ಇವರುಗಳನ್ನು ಯಾರೂ ತಪಾಸಣೆಗೆ ಒಳಪಡಿಸಲಿಲ್ಲವೆ? ಎಂದು ಪ್ರಶ್ನಿಸಿ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಪೊಲೀಸರು ಆಗಮಿಸಿ ವಿಚಾರಿಸಿದಾಗ ಆ ಕಾರ್ಮಿಕರು ತೋಟವೊಂದರಲ್ಲಿ ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದ್ದು, ಪೊಲೀಸರು ಸಂಬAಧಿಸಿದ ಮಾಲೀಕರನ್ನು ಸಂಪರ್ಕಿಸಿದ ಬಳಿಕ ಸೂಕ್ತ ನಿರ್ದೇಶನಗಳನ್ನು ನೀಡಿ ಕಳುಹಿಸಿಕೊಡಲಾಯಿತು. ಅಸ್ಸಾಂನಿAದ ಜಿಲ್ಲೆಗೆ ಬರುವವರಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲದಿದ್ದರೂ ವಾರಾಂತ್ಯದ ಕರ್ಫ್ಯೂ ನಡುವೆ ಜಿಲ್ಲೆಗೆ ಆಗಮಿಸಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.