ಚೆಟ್ಟಳ್ಳಿ, ಆ. ೧೪: ೭೫ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಸಮಿತಿಯ ಸುತ್ತೋಲೆಯಂತೆ ಎಸ್.ಎಸ್.ಎಫ್. ಸೋಮವಾರಪೇಟೆ ಡಿವಿಷನ್ ಸಮಿತಿ ವತಿಯಿಂದ ಆಝಾದಿ ಸಂಗಮ ಹಾಗೂ ಸ್ವಾತಂತ್ರ‍್ಯ ಹೋರಾಟಗಾರ ಮುಹಮ್ಮದ್ ಅಲಿ ಜೌಹರ್ ಹಾಗೂ ಶೌಕತ್ ಅಲಿ ಜೌಹರ್ ಅವರ ಕುರಿತ ಸೆಮಿನಾರ್ ಕಾರ್ಯಕ್ರಮ ಸುಂಟಿಕೊಪ್ಪದಲ್ಲಿ ನಡೆಯಿತು.

ಖಮರುದ್ದೀನ್ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಶಾಫಿ ಸಅದಿ ಉಸ್ತಾದ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಾಗ್ಮಿ, ಚಿಂತಕ ಮುಸ್ತಫಾ ನಈಮಿ ಹಾವೇರಿ ಮಾತನಾಡಿ, ಭಾರತೀಯ ಮುಸಲ್ಮಾನರು ಸ್ವಾತಂತ್ರö್ಯಕ್ಕಾಗಿ ತಮ್ಮ ಸರ್ವವನ್ನೂ ತ್ಯಾಗ ಮಾಡಿದ್ದಾರೆ. ಅವರಲ್ಲಿ ಆಲೀ ಸಹೋದರರು ಪ್ರಮುಖರುಗಳಾಗಿದ್ದಾರೆ. ಓರ್ವ ಮುಸಲ್ಮಾನನಾಗಿ ಉತ್ತಮ ಧಾರ್ಮಿಕ ಚೌಕಟ್ಟಿನಲ್ಲಿ ಬದುಕಿ, ಭಾರತೀಯನಾಗಿ ತಾಯ್ನಾಡಿನ ಋಣವನ್ನು ತೀರಿಸಿದ ಮಹಾತ್ಮರುಗಳಾಗಿದ್ದಾರೆ ಎಂದರು. ಶರೀಫ್ ಅನ್ವಾರಿ ಹೊಸತೋಟ ಕಾರ್ಯಕ್ರಮದ ಕುರಿತು ಮಾತನಾಡಿದರು. ಸೋಮವಾರಪೇಟೆ ಡಿವಿಷನ್ ವತಿಯಿಂದ ಎಸ್‌ಎಸ್‌ಎಫ್ ರಾಜ್ಯ ಸಮಿತಿ ದಅವಾ ಕಾರ್ಯದರ್ಶಿ ಮೌಲಾನಾ ಮುಸ್ತಫಾ ನಈಮಿ ಉಸ್ತಾದರನ್ನು ಸನ್ಮಾನಿಸಲಾಯಿತು. ಡಿವಿಷನ್ ಕಾರ್ಯದರ್ಶಿ ಸ್ವಾದಿಕ್ ಕರ್ಕಳ್ಳಿ ವಂದಿಸಿದರು.