ಪೊನ್ನಂಪೇಟೆ, ಆ.೧೪: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಡಿಕೇರಿ ಗ್ರಾಮದ ಕೆ.ಬಿ.ಅಯ್ಯಪ್ಪ ಅವರ ಲೈನ್ ಮನೆಯಲ್ಲಿ ವಾಸವಾಗಿರುವ ಪಣಿ ಎರವರ ಸನ್ನು ಎಂಬುವವರ ಪತ್ನಿ ಪುಷ್ಪ (೨೮) ತನ್ನ ಇಬ್ಬರು ಮಕ್ಕಳಾದ ಚೀತೆ (೧೧) ಹಾಗೂ ಕಿರಣ (೮) ಎಂಬುವವರೊAದಿಗೆ ಜು.೨೭ ರಂದು ಕಾಣೆಯಾಗಿದ್ದಾರೆ. ಅದೇ ದಿನ ಪಕ್ಕದ ಲೈನ್ ಮನೆಯಲ್ಲಿ ವಾಸವಾಗಿದ್ದ ತೋಟದಲ್ಲಿ ರೈಟರ್ ಕೆಲಸ ಮಾಡುತಿದ್ದ ಸಂಜು ಎಂಬುವವನು ಕೂಡ ಕಾಣೆಯಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ಸಂಜು ಕರೆದುಕೊಂಡು ಹೋಗಿರಬಹುದಾಗಿ ಸನ್ನು ಸಂಶಯ ವ್ಯಕ್ತಪಡಿಸಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ.
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಣೆಯಾದವರ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.
ಇವರ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಿದರೆ ೦೮೨೭೨-೨೨೯೦೦೦, ೦೮೨೭೪-೨೫೭೪೮೮, ೦೮೨೭೪-೨೪೭೨೦೯, ೦೮೨೭೪-೨೪೯೦೪೪ ಈ ದೂರವಾಣಿ ಸಂಖ್ಯೆಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.