ಮಡಿಕೇರಿ, ಆ. ೧೪: ತೋಟಕ್ಕೆ ಅಕ್ರಮ ಪ್ರವೇಶ ಮಾಡಿ, ಕೊಲೆ ಮಾಡಲು ಯತ್ನಿಸಿದರೆಂದು ವೀರಾಜಪೇಟೆ ತಾಲೂಕು ಚೀನಿವಾಡದ ಮಹಿಳೆಯೊಬ್ಬರು ಹಲವರ ಮೇಲೆ ದೂರು ನೀಡಿದ್ದು, ಪೊನ್ನಂಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಜುಲೈ ೨೫ ರಂದು ಮೈಮುನಾ ಎಂಬವರು ನೀಡಿದ ದೂರಿನಲ್ಲಿ ತಾನು ಗಂಡನೊAದಿಗೆ ಚೀನಿವಾಡದ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಮುನೀರ್, ಅಜೀಜ್, ಐಸಮ್ಮ, ಶೆಟ್ಟಿ ಲಾಯರ್, ಕೃಷ್ಣ ಮತ್ತು ಕೃಷ್ಣ ಅವರ ೩ ಮಂದಿ ಕೆಲಸಗಾರರು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೋಟದ ಬೇಲಿಯನ್ನು ಕಿತ್ತು ಹಾಕಿದರೆಂದು ಹೇಳಿದ್ದಾರೆ. ಮುನೀರ್ ಹಾಗೂ ಅಜೀಜ್ ಅವರು ಕತ್ತಿಯಿಂದ ಗಂಡನನ್ನು ಕೊಲೆ ಮಾಡಲು ಯತ್ನಿಸಿದಾಗ ತಾನು ಅಡ್ಡ ಬಂದಾಗ ಎಡಗೈಗೆ ಗಾಯವಾಗಿದೆ ಎಂದೂ ಅವರು ದೂರಿದ್ದಾರೆ. ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ೪೪೭, ೫೦೪,೫೦೬,೩೦೭, ೩೨೪ ಹಾಗೂ ೩೪ ಸೆಕ್ಷನ್ ಅಡಿ ಪೊಲೀಸರು ದೂರು ದಾಖಲಿಸಿದ್ದಾರೆ.