ಸುಂಟಿಕೊಪ್ಪ, ಆ. ೧೨: ಕಾಂಡನಕೊಲ್ಲಿ ಕಂಡಗಾಲ ವಿಭಾಗದಲ್ಲಿ ಮಂಗನ ಹಾವಳಿಯಿಂದ ಕೃಷಿಕರ ಏಲಕ್ಕಿ ಫಸಲು ನಾಶವಾಗುತ್ತಿದೆ. ಕಳೆದ ೧ ತಿಂಗಳಿನಲ್ಲಿ ಎಲ್ಲಿಂದಲೋ ಬಂದ ಮಂಗಗಳು ತೋಟಕ್ಕೆ ಲಗ್ಗೆಯಿಟ್ಟು ಏಲಕ್ಕಿ ಗಿಡದ ದಂಟನ್ನು ತಿಂದು ಹಾಕುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಏಲಕ್ಕಿ ಅಲ್ಪ ಸ್ವಲ್ಪ ಫಸಲು ನೀಡುತ್ತಿದ್ದು ಮಂಗನ ಹಾವಳಿಯಿಂದ ಫಸಲು ಬರುವ ಸಮಯಕ್ಕೆ ಅದು ಕೈಗೆಟುಕದಂತಾಗಿದೆ. ಬೆದರಿಸಿ ಓಡಿಸಿದರೂ ಮತ್ತೆ ಗುಂಪು ಗುಂಪಾಗಿ ಬರುವ ಕೋತಿಗಳು ಏಲಕ್ಕಿ ದಂಟಿನ ರಸಹೀರಿ ಪರಾರಿಯಾಗುತ್ತವೆ. ೧ ತಿಂಗಳಿನಿAದ ಕಾಂಡನಕೊಲ್ಲಿ ವಿಭಾಗದಲ್ಲಿ ಮಂಗಗಳಿAದ ಕೃಷಿಕರಿಗೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯವರು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಅಪ್ಪುಣಿ, ಬಿದ್ದಪ್ಪ, ತಮ್ಮಯ್ಯ, ಗಣಪತಿ ಅವರುಗಳು ಆಗ್ರಹಿಸಿದ್ದಾರೆ.