ಕುಶಾಲನಗರ/ಸುಂಟಿಕೊಪ್ಪ, ಆ. ೧೧: ಕ್ರೀಡಾಪಟುಗಳಿಗೆ ಸಿಗುವಂತಹ ಸರಕಾರದ ಸೌಲಭ್ಯಗಳು ಕೋಚ್‌ಗಳಿಗೂ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸಬೇಕು ಎಂದು ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಹೊನ್ನಂಪಾಡಿ ಅಂಕಿತಾ ಸುರೇಶ್ ಹೇಳಿದರು.

ಇಂದು ತಮ್ಮ ತವರು ಜಿಲ್ಲೆ ಕೊಡಗಿಗೆ ಆಗಮಿಸಿದ ಸುಂಟಿಕೊಪ್ಪ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಕೊಪ್ಪ ಗೇಟ್‌ನಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಭಾರತದ ಹಾಕಿ ಪಟುಗಳು ವಿಶ್ವದ ಸಿಂಹಿಣಿ ಆಟಗಾರರೆಂದು ಗುರುತಿಸಿಕೊಂಡಿದ್ದಾರೆ. ದೇಶದ ಹಾಕಿ ಆಟಗಾರರಿಗೆ ವಿಶ್ವದಲ್ಲಿ ೮ನೇ ರ‍್ಯಾಂಕ್ ಇದ್ದು ಒಲಂಪಿಕ್ಸ್ ನಲ್ಲಿ ೪ನೇ ಮಟ್ಟಕ್ಕೆ ಏರಿರುವುದು ಸಂತಸದ ವಿಷÀಯ ಎಂದರು.ಕ್ರೀಡಾಕಾಶಿ ಖ್ಯಾತಿಯ ಕೊಡಗು ಜಿಲ್ಲೆಯ ಮಗಳಾಗಿ ಒಲಂಪಿಕ್ಸ್ನಲ್ಲಿ ಪಾಲ್ಗೊಂಡ ಬಗ್ಗೆ ಹೆಮ್ಮೆ ಇದೆ. ನಮ್ಮ ತಂಡ ಗೆಲುವಿಗಾಗಿ ಹೋರಾಟ ನಡೆಸಿತ್ತು ಎಂದು ಹೇಳಿದರು. ನಾವು ಪದಕ ಗೆಲ್ಲಲಾಗಲಿಲ್ಲ. ಆದರೆ ಇಡೀ ದೇಶದ ಪ್ರೀತಿಯನ್ನು ಗಳಿಸಿದ್ದೇವೆ. ಕರೆಮಾಡಿ ಸ್ಫೂರ್ತಿ ತುಂಬಿದ ಪ್ರಧಾನಿ ಮೋದಿಯವರ ಕ್ರೀಡಾಪ್ರೇಮವನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯ ಹಾಗೂ ಸದಸ್ಯರು ಸ್ಥಾಯಿ ಸಮಿತಿ

(ಮೊದಲ ಪುಟದಿಂದ) ಅಧ್ಯಕ್ಷ ಎಂ.ಬಿ. ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿ.ಪಿ. ಶಶಿಧರ್, ಮಂಜುಳಾ, ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್, ಕೊಡವ ಸಮಾಜದ ಪದಾಧಿಕಾರಿ ಬೋಸ್ ಮೊಣ್ಣಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಪೊನ್ನಚ್ಚನ ಮೋಹನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಗಡಿ ಭಾಗದಲ್ಲಿ ಅಂಕಿತಾ ಅವರನ್ನು ಗೌರವಿಸಿ ಬರಮಾಡಿಕೊಂಡು ಸಿಹಿ ಹಂಚಿದರು.

ಗೌಡ ಸಂಘದಿAದ ಸ್ವಾಗತ

ಏಳನೇ ಹೊಸಕೋಟೆಯಲ್ಲಿ ಸುಂಟಿಕೊಪ್ಪ ನಾಡು ಗೌಡ ಸಂಘದ ವತಿಯಿಂದ ಆತ್ಮೀಯವಾಗಿ ಆರತಿ ಬೆಳಗಿ ಸ್ವಾಗತ ಕೋರಲಾಯಿತು. ನಂತರ ಸುಂಟಿಕೊಪ್ಪ ಅಯ್ಯಪ್ಪ ದೇವಾಲಯ ದವರೆಗೆ ಕರೆ ತರಲಾಯಿತು. ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಮತ್ತು ಪದಾಧಿಕಾರಿಗಳು, ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ಸುAಟಿಕೊಪ್ಪದಲ್ಲೂ ಸನ್ಮಾನ

ಸುಂಟಿಕೊಪ್ಪಕ್ಕೆ ಆಗಮಿಸಿದ ಅಂಕಿತಾ ಅವರನ್ನು ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿ ಗಳು ಬರಮಾಡಿಕೊಂಡರು. ನಂತರ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಕನ್ನಡ ವೃತ್ತಕ್ಕೆ ಬಂದ ಅಂಕಿತಾಗೆ ಗ್ರಾಮ ಪಂಚಾಯಿತಿ, ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘ, ಬಿಲ್ಲವ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಧರ್ಮಸ್ಥಳ ಸಂಘ, ನಮ್ಮ ಸುಂಟಿಕೊಪ್ಪ ಬಳಗ, ವರ್ಕ್ಶಾಪ್ ಕಾರ್ಮಿಕರ ಸಂಘ, ಚೇಂಬರ್ ಆಫ್ ಕಾಮರ್ಸ್, ತಲೆಹೊರೆ ಕಾರ್ಮಿಕರ ಸಂಘ, ಗೆಳೆಯರ ಬಳಗ, ಅಂಬೇಡ್ಕರ್ ಸಂಘಗಳ ವತಿಯಿಂದ ಸನ್ಮಾನ ನಡೆಯಿತು.

ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಹಾಗೂ ಸದಸ್ಯರು, ಕರವೇ ಅಧ್ಯಕ್ಷ ನಾಗೇಶ್ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ವರ್ಕ್ಶಾಪ್ ಕಾರ್ಮಿಕರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷ ಮುತ್ತಯ್ಯ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನರಸಿಂಹ, ನಮ್ಮ ಸುಂಟಿಕೊಪ್ಪ ಬಳಗದ ಅಧ್ಯಕ್ಷ ಡೆನ್ನಿಸ್, ಧರ್ಮಸ್ಥಳ ಸಂಘದ ಪ್ರತಿನಿಧಿ ಚಿತ್ರ, ಗೆಳೆಯರ ಬಳಗದ ಅಧ್ಯಕ್ಷ ಗಂಗಾಧರ ರೈ, ಜಿ.ಪಂ. ಮಾಜಿ ಸದಸ್ಯ ಭಾರತೀಶ್ ಹಾಗೂ ಸಾರ್ವಜನಿಕರು ಅಂಕಿತಾ ಅವರನ್ನು ಸನ್ಮಾನಿಸಿ ಗೌರವಿಸಿದರು.

ಗೌರವ ಸ್ವೀಕರಿಸಿದ ಅಂಕಿತಾ ಹಾಕಿ ಹಾಗೂ ಭಾರತ ಹಾಕಿ ತಂಡದ ಮೇಲೆ ಪ್ರತಿಯೊಬ್ಬರ ಹಾರೈಕೆ, ಪ್ರೋತ್ಸಾಹ ಇರಲಿ ಎಂದು ಆಶಿಸಿದರು. ಹಾಕಿಯ ಮಾಜಿ ತರಬೇತುದಾರರಾದ ಜಗ್ಗಾರಂಡ ಅಪ್ಪಚ್ಚು, ನಿವೃತ್ತ ಕರ್ನಲ್ ಬಿಜಿವಿ ಕುಮಾರ್, ಕಾರ್ಯಕ್ರಮ ಸಂಘಟಕರಾದ ಸುನಿಲ್, ರಾಕೇಶ್ ಮತ್ತಿತರರು ಹಾಜರಿದ್ದರು.