ಸಿದ್ದಾಪುರ, ಆ. ೧೨: ಹಳೇ ವೈಷಮ್ಯದ ಮೇಲೆ ಯುವಕನೋರ್ವನ ಮೇಲೆ ಯುವಕರಿಬ್ಬರು ಸೇರಿ ಹಲ್ಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಈರ್ವರನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ದಾಪುರ ಸಮೀಪದ ಕೂಡುಗದ್ದೆ ನಿವಾಸಿಯಾಗಿರುವ ಆಸಿಂ (೨೪) ಎಂಬಾತ ೧೫ ದಿನಗಳ ಹಿಂದೆ ನೆಲ್ಯಹುದಿಕೇರಿಯ ಪಟ್ಟಣದಲ್ಲಿ ವಾಸವಿರುವ ಕ್ರಿಷ್ಟಲ್ (೨೬) ಎಂಬಾತನಿಗೆ ಹಲ್ಲೆ ನಡೆಸಿ ಬ್ಲೇಡ್‌ನಿಂದ ಇರಿದು ಗಾಯಗೊಳಿಸಿದ್ದ. ಈ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಆಸಿಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕ್ರಿಷ್ಟಲ್ ಹಾಗೂ ಆತನ ಮಾವನಾದ ಷಾಜೀ (೩೪) ಇವರಿಬ್ಬರು ಸೇರಿ ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿ ಆಸಿಂ ಮೇಲೆ ಕಬ್ಬಿಣದ ರಾಡಿನಿಂದ ಕಾಲಿಗೆ ಹಾಗೂ ಕೈಯಿಗೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ಅಸಿಂ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಸ್ಟಲ್ ಹಾಗೂ ಷಾಜೀ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.