ವೀರಾಜಪೇಟೆ, ಆ. ೧೨: ಐತಿಹಾಸಿಕ ಮಡಿಕೇರಿ ಕೋಟೆ ಹಾಗೂ ಅರಮನೆ ಕಟ್ಟಡದ ನವೀಕರಣ ಕಾಮಗಾರಿಯನ್ನು ಮುಂಗಾರು ಕಾರಣ ನೀಡಿ ದಿಢೀರ್ ಸ್ಥಗಿತಗೊಳಿಸಿರುವ ಭಾರತೀಯ ಪುರಾತತ್ವ ಇಲಾಖೆಯ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಶಿಥಿಲಾವಸ್ಥೆಯಲ್ಲಿರುವ ಕೋಟೆ ಹಾಗೂ ಅರಮನೆ ಕಟ್ಟಡ ಸಂರಕ್ಷಿಸಿ ನವೀಕರಿಸಲು ಸರ್ಕಾರಕ್ಕೆ ನಿರ್ದೇಶಿ ಸುವಂತೆ ಕೋರಿ ನಿವೃತ್ತ ಐ.ಎ.ಎಸ್. ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕರು ಪ್ರಮಾಣಪತ್ರ ಸಲ್ಲಿಸಿ, ಮುಂಗಾರು ಆರಂಭಗೊAಡಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ನೀರು ಸೋರಿಕೆ ಭಾಗಗಳ ದುರಸ್ತಿ ಕಾರ್ಯ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾಮಗಾರಿ ನಿಲ್ಲಿಸಲಾಗಿದೆ. ನೀರು ಸೋರುವ ಭಾಗಗಳನ್ನು ಟಾರ್ಪಾಲಿನ್ ಹೊದಿಸಿ ಮುಚ್ಚಲಾ ಗಿದೆ. ನೀರು ಸೋರಿಕೆ ಯಿಂದ ಅರಮನೆಗೆ ಯಾವುದೇ ಹಾನಿಯಾಗು ವುದಿಲ್ಲ ಎಂದು ತಿಳಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅರಮನೆ ನವೀಕರಣ ಸಂಬAಧ ಕಳೆದ ಜು. ೨೮ರಂದು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನೀರು ಸೋರುವ ೩ ಭಾಗಗಳ ದುರಸ್ತಿಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಆ. ೧೦ರಂದು ಮುಂಗಾರು ಕಾರಣದಿಂದ ದಿಢೀರ್ ಕಾರ್ಯ ನಿಲ್ಲಿಸಲಾಗಿದೆ. ಜು. ೨೮ರಂದು ಪ್ರಮಾಣಪತ್ರ ಸಲ್ಲಿಸುವಾಗ ಈ ಬಗ್ಗೆ ಅಧಿಕಾರಿಗೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿತು. ಮುಂಗಾರು ಕಾರಣದಿಂದ ದುರಸ್ತಿ ಕಾಮಗಾರಿ ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳುವಾಗ ಹಿರಿಯ ಕಟ್ಟಡ ಇಂಜಿನಿಯರ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿ ಸೆ. ೩ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಹಾಗೂ ಟೆಂಡರ್ ಪ್ರಕ್ರಿಯೆಯ ಪ್ರಗತಿ ವರದಿ ಸಲ್ಲಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಸೆ.೭ಕ್ಕೆ ಮುಂದೂಡಿತು.