*ಗೋಣಿಕೊಪ್ಪಲು, ಆ. ೧೦: ಕಳೆದ ಎರಡು ವರ್ಷಗಳಿಂದ ದೇಶ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲ್ಲೂ ಶಿಕ್ಷಣ ಕ್ಷೇತ್ರ ಒಂದಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ವಿಷಾದ ವ್ಯಕ್ತಪಡಿಸಿದರು.
ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕದ ಕೆಡೆಟ್ಗಳಿಗೆ ಕೋವಿಡ್ ಮಹಾಮಾರಿಯಿಂದ ಪಾರಾಗಲು ಇರುವ ಮಾರ್ಗ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೊರೊನಾ ಮಹಾಮಾರಿಯಿಂದ ಮಕ್ಕಳು ಪರಿಪೂರ್ಣ ಶಿಕ್ಷಣವನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಎಂಬವುದು ನೋವಿನ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇಂತಹ ಸಂಕಷ್ಟಗಳಿAದ ಧೃತಿಗೆಡದೆ ಸಮಯದ ಸದುಪಯೋಗ ಪಡಿಸಿಕೊಂಡು ಅಭ್ಯಾಸದಲ್ಲಿ ನಿರತರಾಗಬೇಕೆಂದು ಸಲಹೆ ನೀಡಿದರು.
ಎನ್.ಸಿ.ಸಿ. ತರಬೇತಿ ಹೊಂದುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸೇನೆಯ ಮುಖ್ಯ ಹುದ್ದೆಗಳನ್ನು ಹೊಂದುವ ಪರಿಣಿತಿಯನ್ನು ಹೊಂದಬೇಕು. ಈ ಕಾರಣಕ್ಕಾಗಿ ಕಾಲೇಜಿನಲ್ಲಿ ನಿವೃತ್ತ ಹಾಗೂ ಉನ್ನತ ಅಧಿಕಾರಿಗಳಿಂದ ತರಬೇತಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಐ.ಕ್ಯು.ಎ.ಸಿ. ಸಂಚಾಲಕಿ ಪ್ರೊ. ಭಾರÀತಿ ಕೆಡೆಟ್ಗಳನ್ನು ಉದ್ದೇಶಿಸಿ ಮಾತನಾಡಿದರು. ಲೆಫ್ಟಿನೆಂಟ್ ಅಕ್ರಂ, ಲೇಪಾಕ್ಷಿ, ಸಾರ್ಜೆಂಟ್ ನಿಶ್ವಿತ್ ತಿಮ್ಮಯ್ಯ, ಹರ್ಷಿತಾ ಹಾಗೂ ಎನ್.ಸಿ.ಸಿ. ಕೆಡೆಟ್ಗಳು ಹಾಜರಿದ್ದರು.