ಮಡಿಕೇರಿ, ಆ. ೧೦: ಈ ಬಾರಿಯ ಹತ್ತನೆ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಯ ೧೨ ಮಂದಿ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳೊAದಿಗೆ ಸಾಧನೆ ಮಾಡಿದ್ದಾರೆ. ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ಎ.ಎಂ. ಜೆನಿತಾ ೬೨೫ಕ್ಕೆ ೬೨೫ ಅಂಕ ಪಡೆದಿದ್ದು, ಈಕೆ ಯಸಳೂರಿನ ಮಹೇಶ್ ಹಾಗೂ ದಿವ್ಯ ಜ್ಯೋತಿ ದಂಪತಿಯ ಪುತ್ರಿ.ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ಕೆ.ಎಂ. ಲಾಸ್ಯ ಕಾವೇರಮ್ಮ (೬೨೩) ಅಂಕಗಳಿಸಿದ್ದು, ಈಕೆ ರ‍್ವತ್ತೊಕ್ಲುವಿನ ಕೆ.ಪಿ. ಮಂದಣ್ಣ ಹಾಗೂ ಶೋಭಾ ದಂಪತಿಯ ಪುತ್ರಿ. ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ಪಿ.ಎಸ್. ಬಿಪಿನ್ ಚಂಗಪ್ಪ (೬೨೩) ಅಂಕ ಪಡೆದಿದ್ದು, ಈತ ಅತ್ತೂರಿನ ಪಿ.ಬಿ. ಸತೀಶ್ ಹಾಗೂ ಟಿ.ಪಿ. ಹರಿಣಿ ದಂಪತಿಯ ಪುತ್ರ. ಮಡಿಕೇರಿ ಸಂತ ಜೋಸೆಫರ ಶಾಲೆಯ ರೊಲೆನ್ಸಿಯಾ ಬಿಯೊನ್ (೬೨೩) ಅಂಕ ಗಳಿಸಿದ್ದು, ಈಕೆ ಸುದರ್ಶನ ವೃತ್ತದ ರಾಯ್ ಓಸ್ವಾಲ್ಡ್ ಹಾಗೂ ರೇಖಾ ರಾಯ್ ದಂಪತಿಯ ಪುತ್ರಿ.

ಸೋಮವಾರಪೇಟೆ ಓಎಲ್‌ವಿ ಕಾನ್ವೆಂಟ್‌ನ ಅಪೂರ್ವ (೬೨೧) ಅಂಕ ಪಡೆದಿದ್ದು, ಈಕೆ ಆಲೆಕಟ್ಟೆಯ ಮನುಕುಮಾರ್ ರೈ ಹಾಗೂ ಶೋಭಾ ದಂಪತಿಯ ಪುತ್ರಿ. ಕುಶಾಲನಗರ ಫಾತಿಮಾ ಕಾನ್ವೆಂಟ್‌ನ ಯು.ಎನ್. ಮಯೂರಿ (೬೨೧) ಅಂಕ ಗಳಿಸಿದ್ದು, ಈಕೆ ಕುಶಾಲನಗರ ಬಿ.ಎಂ. ಲೇಔಟ್‌ನ ಉ.ರ. ನಾಗೇಶ್ ಹಾಗೂ ರಜಿನಿ ದಂಪತಿಯ ಪುತ್ರಿ. ಕಳತ್ಮಾಡು ಲಯನ್ಸ್ ಪ್ರೌಢ ಶಾಲೆಯ ಆರ್ಯನ್ ಕಾರ್ಯಪ್ಪ (೬೨೧) ಅಂಕ ಪಡೆದಿದ್ದು, ಈತ ಕಾಕೋಟುಪರಂಬುವಿನ ಎ.ಪಿ. ಪೂಣಚ್ಚ ಹಾಗೂ ನಿರ್ಮಲ ದಂಪತಿಯ ಪುತ್ರ.

ಮಡಿಕೇರಿ ಸಂತಜೋಸೆಫರ ಕಾನ್ವೆಂಟ್‌ನ ಎಂ.ಹೆಚ್. ಅನನ್ಯ (೬೨೧) ಅಂಕ ಪಡೆದಿದ್ದು, ಈಕೆ ಕಾವೇರಿ ಲೇಔಟ್‌ನ ಹರೀಶ್‌ನಾಯಕ್ ಹಾಗೂ ಯಮುನಾ ದಂಪತಿಯ ಪುತ್ರಿ. ಸುಂಟಿಕೊಪ್ಪ ಸಂತ ಮೇರಿ ಪ್ರೌಢಶಾಲೆಯ ಗ್ಲೆನಿಯಾಡಿಸೋಜ (೬೨೧) ಅಂಕ ಪಡೆದಿದ್ದು, ಈಕೆ ಅಪ್ಪಾರಂಡ ಬಡಾವಣೆಯ ಗ್ರೇಸಿಯಸ್ ಹಾಗೂ ಎಲಿಜಬೆತ್ ದಂಪತಿಯ ಪುತ್ರಿ. ಕೊಟ್ಟೂರು ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯ ಕೆ.ಟಿ. ಹರ್ಷಿತ (೬೧೯) ಅಂಕ ಪಡೆದಿದ್ದು, ಈಕೆ ಕೆ.ಬಿ. ತಮ್ಯಯ್ಯ ಹಾಗೂ ಮೀನಕುಮಾರಿ ದಂಪತಿಯ ಪುತ್ರಿ.

ಮೂರ್ನಾಡು ಶ್ರೀ ಮಾರುತಿ ಆಂಗ್ಲ ಮಾಧ್ಯಮ ಶಾಲೆಯ ಡಬ್ಲುö್ಯ.ಪಿ. ವೈಶಾಲಿ (೬೧೯) ಅಂಕ ಪಡೆದಿದ್ದು, ಈಕೆ ಕಾಂತೂರು ಗ್ರಾಮದ ಡಬ್ಲುö್ಯ.ಎ. ಪಳಂಗಪ್ಪ ಹಾಗೂ ಜಾನಕಿ ದಂಪತಿಯ ಪುತ್ರಿ. ಕುಶಾಲನಗರ ಫಾತಿಮಾ ಕಾನ್ವೆಂಟ್‌ನ ಮುಸ್ಕಾನ್ (೬೧೯) ಅಂಕ ಪಡೆದಿದ್ದು, ಈಕೆ ಕುಶಾಲನಗರ ಬಿ.ಎಂ. ರಸ್ತೆಯ ಮುಜೀಬ್ ರಹಮಾನ್ ಹಾಗೂ ಸಾದಿಯ ಸುಲ್ತಾನ ದಂಪತಿಯ ಪುತ್ರಿ.