ಮಡಿಕೇರಿ, ಆ. ೧೦: ಇತ್ತೀಚಿನ ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಪರಿಶೀಲಿಸಿದರೆ ನೂತನ ಸಚಿವ ಸಂಪುಟ ಆಯ್ಕೆಯಲ್ಲಿ ರಾಜ್ಯಕ್ಕೆ ಹಾಗೂ ರಾಷ್ಟçಕ್ಕೆ ಆರ್ಥಿಕವಾಗಿ, ರಾಷ್ಟçಭದ್ರತೆಯಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿದ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ನಿರ್ಲಕ್ಷಿಸುತ್ತಿರುವುದು ಕೊಡಗು ಜಿಲ್ಲೆಗೆ ಮಾಡಿದ ಅಪಮಾನ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೋಮಣ್ಣ ಸೂರ್ತಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಕೊಡಗು ಗೌಡ ಫೆಡರೇಷನ್ ಇತ್ತಿಚೇಗೆ ಗೌಡ ಸಮಾಜಗಳ ಪ್ರಮುಖರನ್ನು ಒಳಗೊಂಡು ಸಭೆ ನಡೆಸಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ನಿರ್ಲಕ್ಷಿಸಿರುವ ಆಡಳಿತ ಪಕ್ಷದ ಕ್ರಮವನ್ನು ಖಂಡಿಸಿದೆ.

ಕೆಲವಾರು ವರ್ಷಗಳ ಹಿಂದೆ ಮೂರು ಮಂತ್ರಿಗಳನ್ನು ಕೊಡಗಿಗೆ ನೀಡಿ ಬೆಳವಣಿಗೆಗೆ ಸಹಕಾರ ನೀಡಿದ ರಾಜಕೀಯ ಪಕ್ಷವನ್ನು ಕೆಲವಾರು ಕಾರಣಗಳಿಂದ ನಿರ್ಲಕ್ಷಿಸಿ ಹಲವು ಅವಧಿಗಳಲ್ಲಿ ಭಾರತೀಯ ಜನತಾ ಪಕ್ಷದ ಎರಡು ಶಾಸಕ ಸ್ಥಾನವನ್ನು ಕೊಡಗಿನಿಂದ ಆರಿಸಿ ಭಾರತೀಯ ಪಕ್ಷವನ್ನು ಕಟ್ಟಿ ಬೆಳಸಲಾಯಿತು. ಆದರೂ ಮಂತ್ರಿ ಮಂಡಲದಲ್ಲಿ ಕೊಡಗಿಗೆ ಪ್ರಾತಿನಿಧ್ಯ ನೀಡದೆ ಇರುವ ಕ್ರಮದಿಂದ ಆಡಳಿತ ಪಕ್ಷ ಹೊರಬರಬೇಕು ಎಂದು ಒತ್ತಾಯಿಸಲಾಯಿತು.

ಕೆಲವು ವರ್ಷಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ್ಲವಾಗಿ ಮುಖ್ಯಮಂತ್ರಿಗಳನ್ನೊಳಗೊAಡAತೆ ಹಲವು ಮಂತ್ರಿಗಳ ಚಾರಿತ್ರö್ಯ ಹರಣವಾಗಿ ಸರ್ಕಾರ ಅಪಾಯದಲ್ಲಿದಾಗ ಸರ್ಕಾರವನ್ನು ಅಪಾಯದ ಅಂಚಿನಿAದ ಪಾರು ಮಾಡಿದ ಅಂದಿನ ವಿಧಾನಸಭಾಧ್ಯಕ್ಷ ಇಂದಿನ ಹಿರಿಯ ರಾಜಕಾರಣಿ ಹಾಗೂ ಹಾಲಿ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಅವರು ಮಂತ್ರಿ ಮಂಡಲದಲ್ಲಿ ಸ್ಥಾನವಿಲ್ಲದೆ ಅವಮಾನಿತರಾಗಿ ಮೌನಿಯಾಗಿರುವುದು ಕೊಡಗಿನ ಪಾಲಿಗೆ ದುರದೃಷ್ಟಕರ. ತಕ್ಷಣವೇ ಆಡಳಿತ ಪಕ್ಷದ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿಗಳು ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಈಗಿನ ಮಂತ್ರಿಮAಡಲದಲ್ಲಿ ಸೇರ್ಪಡೆಗೊಳಿಸಿ ಒಂದು ಪ್ರಮುಖ ಖಾತೆಯನ್ನು ನೀಡಬೇಕೆಂದು ಕೊಡಗು ಗೌಡ ಫೆಡರೇಷನ್ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿರುವ ಅವರು, ಈ ನಿಟ್ಟಿನಲ್ಲಿ ಶೀಘ್ರವೇ ರಾಜಕೀಯ ಪಕ್ಷದ ಪ್ರಮುಖರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

(ಮೊದಲ ಪುಟದಿಂದ)

ಹಾಕತ್ತೂರು ಶಕ್ತಿ ಕೇಂದ್ರ

ಕೊಡಗಿನಲ್ಲಿ ೪ ಬಾರಿ ಶಾಸಕರಾಗಿ ಅನುಭವ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ. ಅನುಭವಿ ಶಾಸಕರಾದ ಕೆ.ಜಿ. ಬೋಪಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಹಾಕತ್ತೂರು ಶಕ್ತಿ ಕೇಂದ್ರ ಮುಖ್ಯಮಂತ್ರಿ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ಕೊರೊನಾ ಸಂದರ್ಭ ಹಳ್ಳಿಹಳ್ಳಿಗೆ ಭೇಟಿ ನೀಡಿ ನಿಯಂತ್ರಣಕ್ಕೆ ತರುವಲ್ಲಿ ಸತತವಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಸಭಾಧ್ಯಕ್ಷರಾಗಿ ಅನುಭವ ಹೊಂದಿರುವ ಇವರು ಮುಖ್ಯಮಂತ್ರಿ ಸ್ಥಾನಕ್ಕೂ ಸೂಕ್ತ ಅಭ್ಯರ್ಥಿ ಆಗಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡಿದಲ್ಲಿ ಕೊಡಗಿನ ಅಭಿವೃದ್ಧಿ ಸಾಧ್ಯ. ಆದುದರಿಂದ ಕೊಡಗಿನ ಅನುಭವಿ ಶಾಸಕರಾದ ಬೋಪಯ್ಯ ಅವರಿಗೆ ಮಂತ್ರಿ ನೀಡಿ ಕೊಡಗಿನ ಉಸ್ತುವಾರಿ ಸಚಿವರನ್ನು ಮಾಡಬೇಕು ಹೇಳಿದ್ದಾರೆ.

ಪಿ.ಪಿ. ಸುಕುಮಾರ್, ಪ್ರಮುಖರು ಶಕ್ತಿ ಕೇಂದ್ರ, ಅಮ್ಮಟಂಡ ಶಕ್ತಿಕೇಂದ್ರ ಸಹಪ್ರಮುಖರು ಸವಿತ, ಅಧ್ಯಕ್ಷರು ಗ್ರಾಮ ಪಂಚಾಯತ್ ಹಾಕತ್ತೂರು. ಕಿರಣ, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಗೂ ಸದಸ್ಯರು. ಕೆ.ಎಂ. ಮೋಹನ್, ಬಿಜೆಪಿ ಮಹಾ ಶಕ್ತಿ ಕೇಂದ್ರ ಸದಸ್ಯರು, ದೇವಿಪ್ರಸಾದ್ ಪಿ.ಈ. ಬಿಜೆಪಿ ಸಾಮಾಜಿಕ ಜಾಲತಾಣ ಸದಸ್ಯರು ಹಾಗೂ ಕಗ್ಗೋಡ್ಲು ಹಾಗೂ ಹಾಕತ್ತೂರು ಬೂತ್ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರುಗಳು ಮನವಿ ಕಳುಹಿಸಿದ್ದಾರೆ.