ಹೆಚ್.ಜೆ. ರಾಕೇಶ್ ಮಡಿಕೇರಿ, ಆ. ೧೧: ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆ ಮಳೆರಾಯನ ಅಬ್ಬರಕ್ಕೆ ಸಿಲುಕಿ ನಲುಗಿಹೋಗಿದೆ. ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಗಳು ಸಂಭವಿಸಿವೆ. ಮಳೆಗಾಲ ಬಂತೆAದರೆ ಭಯ ಮೂಡುತ್ತದೆ.ಪ್ರಸಕ್ತ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು ೯೫ ಮನೆಗಳಿಗೆ ಹಾನಿಯಾಗಿದ್ದು, ಮಳೆಯಿಂದ ಹಾನಿಯಾದ ಮನೆಗಳಿಗೆ ಯಾವ ಮಾರ್ಗಸೂಚಿ ಅನ್ವಯ ಪರಿಹಾರ ನೀಡಬೇಕೆಂಬ ಗೊಂದಲ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಸ್ಪಷ್ಟೀಕರಣ ಕೋರಿ ಕೊಡಗು ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.೯೫ ಮನೆಗಳಿಗೆ ಹಾನಿ ಜಿಲ್ಲೆಯ ೫ ತಾಲೂಕಿನಲ್ಲಿ ೯೫ ಮನೆಗಳಿಗೆ ಹಾನಿಯಾಗಿವೆ ಎಂದು ಜಿಲ್ಲಾಡಳಿತ ಅಂಕಿ-ಅAಶ ತಯಾರಿಸಿದೆ. ಎ, ಬಿ ಹಾಗೂ ಸಿ ವರ್ಗದಲ್ಲಿ ಮನೆಗಳ ಹಾನಿಯನ್ನು ವಿಂಗಡಿಸಲಾಗಿದೆ. ಶೇ ೭೫ ರಿಂದ ೧೦೦ ರಷ್ಟು ಹಾನಿ ಸಂಭವಿಸಿದರೆ ಅದನ್ನು ‘ಎ’, ಶೇ ೨೫ ರಿಂದ ೭೪ ರಷ್ಟು ಹಾನಿಯನ್ನು ‘ಬಿ’, ಶೇ ೧೫ ರಿಂದ ೨೪ ಹಾನಿಯನ್ನು ‘ಸಿ’ ವರ್ಗ ಎಂದು ವಿಂಗಡಿಸಲಾಗಿದೆ. ‘ಎ’ ವರ್ಗದಲ್ಲಿ ಒಟ್ಟು ೩, ‘ಬಿ’ ವರ್ಗದಲ್ಲಿ ೨೯, ‘ಸಿ’ ವರ್ಗದಲ್ಲಿ ೬೩ ಮನೆಗಳಿಗೆ ಹಾನಿ ಸಂಭವಿಸಿವೆ.
ಮಾರ್ಗಸೂಚಿಯಲ್ಲಿ ಗೊಂದಲ - ಸರಕಾರಕ್ಕೆ ಪತ್ರ
ಮನೆಗಳ ಹಾನಿಯನ್ನು ಮೂರು ವಿಭಾಗದಲ್ಲಿ ವಿಂಗಡಿಸಲಾಗಿದೆ. ಆದರೆ, ಹಳೆಯ ಅಥವಾ ಹೊಸ ಮಾರ್ಗಸೂಚಿ
(ಮೊದಲ ಪುಟದಿಂದ) ಅನ್ವಯ ಪರಿಹಾರ ನೀಡುವುದರ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ. ಪ್ರಸಕ್ತ ಸಾಲಿನಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರಕರಣಗಳಿಗೆ ಪರಿಹಾರ ನೀಡಲು ಸ್ಪಷ್ಟೀಕರಣ ಕೋರಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
೨೦೧೫ರಲ್ಲಿ ಎಸ್.ಡಿ.ಆರ್.ಎಫ್. ಹಾಗೂ ಎನ್.ಡಿ.ಆರ್.ಎಫ್. ಹೊರಡಿಸಿದ ಮಾರ್ಗಸೂಚಿ ಅನ್ವಯ ಸಮತಟ್ಟು ಪ್ರದೇಶದಲ್ಲಿರುವ ಮನೆಗಳು ಸಂಪೂರ್ಣ ಹಾನಿಯಾಗಿದ್ದಲ್ಲಿ ರೂ. ೯೫,೧೦೦, ಬೆಟ್ಟ ಪ್ರದೇಶದದಲ್ಲಿರುವ ಮನೆ ತೀವ್ರವಾಗಿ ಹಾನಿಯಾಗಿದ್ದಲ್ಲಿ ರೂ. ೧,೦೧, ೯೦೦, ಪಕ್ಕಾ ಮನೆಗಳು ಶೇ ೧೫ ರಷ್ಟು ಹಾನಿಯಾಗಿದ್ದಲ್ಲಿ ರೂ. ೫,೨೦೦, ಕಚ್ಚಾ ಮನೆಗಳು ಶೇ ೧೫ ರಷ್ಟು ಹಾನಿಯಾಗಿದ್ದಲ್ಲಿ ರೂ. ೩,೨೦೦ ಪಾವತಿ ಮಾಡಲು ಹೇಳಿತ್ತು. ಅದರಂತೆ ೨೦೧೮ರಲ್ಲಿ ಕ್ರಮಕೈಗೊಳ್ಳಲಾಗಿತ್ತು. ಜೊತೆಗೆ ಸಂಪೂರ್ಣ ಮನೆ ಹಾನಿಯಾದವರಿಗೆ ಪುನರ್ವಸತಿ ಕೂಡ ಅಂದಿನ ಸರಕಾರ ಕಲ್ಪಿಸಲು ಕ್ರಮವಹಿಸಿತ್ತು.
೨೦೧೯-೨೦ ಹಾಗೂ ೨೦-೨೧ನೇ ಸಾಲಿನ ಮಳೆಹಾನಿ ಪ್ರಕರಣಗಳಿಗೆ ಸಂಬAಧಿಸಿದAತೆ ಪೂರ್ಣ ಮನೆಹಾನಿ ಹಾಗೂ ಮನೆ ಪುನರ್ ನಿರ್ಮಾಣಕ್ಕಾಗಿ ರೂ. ೫ ಲಕ್ಷ, ತೀವ್ರ ಮನೆಹಾನಿ ದುರಸ್ತಿಗಾಗಿ ರೂ. ೩ ಲಕ್ಷ, ಅಲ್ಪಸ್ವಲ್ಪ ಮನೆಹಾನಿಗೆ ರೂ. ೫೦ ಸಾವಿರ ಪರಿಹಾರವನ್ನು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಈ ೨ ಅವಧಿಗಳಲ್ಲಿ ಕೊಡಗು ಜಿಲ್ಲೆಯನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಸರಕಾರ ಘೋಷಿಸಿತ್ತು. ಈ ಹಿನ್ನೆಲೆ ಜಿಲ್ಲೆಗೆ ಹೊಸ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲಾಗಿತ್ತು. ಪರಿಹಾರ ಪಾವತಿಸಲು ಸಂಬAಧಿಸಿದAತೆ ಸಂತ್ರಸ್ತರ ವಿವರವನ್ನು ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾAಶದಲ್ಲಿ ದಾಖಲಿಸಿ ಕಾಮಗಾರಿ ಅನುಸಾರವಾಗಿ ನಿಗಮದ ಮೂಲಕ ನೇರವಾಗಿ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ಕ್ರಮವಹಿಸಲಾಗಿತ್ತು.
ಆದರೆ, ಈ ಬಾರಿ ಸರಕಾರ ಜಿಲ್ಲೆಯನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ. ಆದರಿಂದ ಇವೆರಡು ಮಾರ್ಗಸೂಚಿ ವಿಭಿನ್ನವಾಗಿದ್ದು ಪ್ರಸಕ್ತ ಸಾಲಿನ ಮನೆ ಹಾನಿ ಪ್ರಕರಣಗಳಿಗೆ ಪರಿಹಾರವನ್ನು ಯಾವ ವಿಧಾನ ಅನುಸರಿಸಿ ಪಾವತಿಸುವುದು ಎಂಬ ಗೊಂದಲ ಜಿಲ್ಲಾಡಳಿತಕ್ಕೆ ಮೂಡಿದೆ.