
ಮಡಿಕೇರಿ, ಆ. ೧೧: ಇತ್ತೀಚೆಗೆ ನಡೆದ ರಾಷ್ಟçಮಟ್ಟದ ‘ಆರ್ಟ್ ಪ್ಲಸ್ ಇಂಡಿಯಾ’ ಹಾಡುಗಾರಿಕೆ ಸ್ಪರ್ಧೆಯಲ್ಲಿ ‘ಕರ್ನಾಟಕದ ಸ್ಟೇಟ್ ಚಾಂಪಿಯನ್’ ಆಗಿ ಬಾಳೆಲೆಯ ಯುವ ಗಾಯಕ ಅನ್ವಿತ್ ಕುಮಾರ್
(ಮೊದಲ ಪುಟದಿಂದ) ಹೊರ ಹೊಮ್ಮಿದ್ದಾನೆ. ಬಾಳೆಲೆ ಗಣಪತಿ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಮತ್ತು ಚಂದ್ರಕಲಾ ಮೂರ್ತಿ ದಂಪತಿಗಳ ಪುತ್ರನಾಗಿರುವ ಈತ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಬಾಳೆಲೆಯ ವತ್ಸಲ ನಾರಾಯಣ್ ಅವರಲ್ಲಿ ಮತ್ತು ದ್ವಾನ್ ಬಾಲಸುಬ್ರಮಣ್ಯಂ ಅಯ್ಯರ್ ಅವರಲ್ಲಿ ವಿದ್ವತ್ ಅಭ್ಯಸಿಸುತ್ತಿದ್ದಾನೆ.