ಗುಡ್ಡೆಹೊಸೂರು, ಆ. ೧೧: ಪತ್ರಕರ್ತರು ನೈಜತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ. ಎಂದು ಅಂರ‍್ರಾಷ್ಟಿçÃಯ ಎಡ್ವರ್ಡ್ ಫೌಂಡೇಶನ್ ಚೇರ್ಮನ್ ರಾಜೇಂದರ್ ಮಾರ್ ಇಲ್ಲಿ ತಿಳಿಸಿದರು. ಗುಡ್ಡೆಹೊಸೂರು ಸಮೀಪದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊರೊನಾ ಹರಡುವಿಕೆಯ ಸಂದರ್ಭದಲ್ಲಿಯೂ ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂದರ್ಭವೂ ಸುದ್ದಿ ಸಂಗ್ರಹಿಸುವಲ್ಲಿ ಪತ್ರಕರ್ತರ ಪಾತ್ರ ಅಮೋಘವಾಗಿದೆ ಎಂದರು. ಅಂತಹ ಪತ್ರಕರ್ತರ ಅಭಿನಂದನೆಗೆ ನಮ್ಮ ಎಡ್ವರ್ಡ್ ಫೌಂಡೇಶನ್ ವತಿಯಿಂದ ವೇದಿಕೆ ಕಲ್ಪಿಸಿರುವುದು ಸಂತೋಷದಾಯಕವಾಗಿದೆ. ಎಂದು ತಿಳಿಸಿದರು. ನಂತರ ಮಾತನಾಡಿದ ಎಡ್ವರ್ಡ್ ಫೌಂಡೇಶನ್ ಚೇರ್ಮನ್ ರಾಜೇಂದ್‌ರ್ ಅವರ ಮಗ ಆರ್ಜಿ ಮಾರ್ ವಿದೇಶದಲ್ಲಿ ನೆಲೆಸಿರುವ ಎಡ್ವರ್ಡ್ ಫೌಂಡೇಶನ್‌ನ ಸಂಸ್ಥಾಪಕ ಎಡ್ವರ್ಡ್ ಅವರ ಸಹಕಾರದೊಂದಿಗೆ ಸಾವಿರಾರು ಮಂದಿ ಬಡಕುಟುಂಬಗಳಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಉಚಿತ ಆಹಾರ ಸಾಮಗ್ರಿಗಳ ಕಿಟ್ ಅನ್ನು ನೀಡಲಾಗಿದೆ ಎಂದರು. ಇದಕ್ಕೆ ಸಹಕರಿಸುತ್ತಿರುª ೨೨ ಮಂದಿ ಅಖಿಲೇಶ್ ತಂಡದವರಿಗೆ ಕೊಡಗು ಮೈಸೂರು ಗಡಿಭಾಗದ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಎಲ್ಲಾ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭ ಎಡ್ವರ್ಡ್ ಫೌಂಡೇಶ್‌ನ ಅರ್ಚನಾ ಮಾರ್, ಅಮಿತಾ ಮಾರ್, ಆಪ್ತ ಕಾರ್ಯದರ್ಶಿ ರಾಧಿಕಾ, ಸಂಪಾದಕರ ಮತ್ತು ವರದಿಗಾರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೆ.ಟಿ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ವಿನೋದ್ ಕುಮಾರ್, ಕುಶಾಲನಗರ ಅಧ್ಯಕ್ಷ ಶಿವಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಹೆಚ್.ಎನ್. ಕುಮಾರ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಪಳನಿ ಪ್ರಕಾಶ್. ಪತ್ರಕರ್ತರಾದ ಗಣೇಶ್, ಶಿವರಾಜ್, ಜಯಪ್ರಕಾಶ್, ಪ್ರಶಾಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.