ಮಡಿಕೇರಿ, ಆ. ೧೧: ಚಿತ್ರವನ್ನು ನೋಡಿ ಇದಾವುದೋ ಆಮೆ ಮರಿ ಅಥವಾ ಮೊಲದ ಮರಿ ಇರಬಹುದೆಂದು ನೀವು ಊಹಿಸಿದ್ದರೆ ಅದು ತಪ್ಪು.

ಮೊಟ್ಟೆ ಮೊದಲೋ ಅಥವಾ ಕೋಳಿ ಮೊದಲೋ ಎಂಬ ಪ್ರಶ್ನೆಗೆ ಇನ್ನೂ ಉತ್ತರಕ್ಕೆ ತಡಕಾಟ ನಡೆಯುತ್ತಲೇ ಇದೆ. ಆದರೆ ಇಲ್ಲೊಂದು ಕೋಳಿಯು ವಿಚಿತ್ರ ಆಕಾರದ ಮೊಟ್ಟೆಯನ್ನಿಟ್ಟಿರುವ ಸೋಜಿಗದ ಪ್ರಸಂಗ ನಡೆದಿದೆ. ಅರಪಟ್ಟು ಪೊದವಾಡ ಕಡಂಗ ಗ್ರಾಮದ ಕೋಳೆಯಂಡ ರೇಖಾ ಪ್ರಸನ್ನ ಅವರ ಮನೆಯ ಕೋಳಿ ಎಂದಿನAತೆ ಮೊಟ್ಟೆಯನ್ನೇ ಇಡುತ್ತಿತ್ತು. ಆದರೆ ಇಂದು ಕೋಳಿ ಇಟ್ಟ ಮೊಟ್ಟೆಯನ್ನು ನೋಡಿದ ಮನೆಯವರು ಆಶ್ಚರ್ಯಚಕಿತಕ್ಕೊಳಗಾಗಿದ್ದಾರೆ. ಮೊಟ್ಟೆಯು ಎಂದಿನAತೆ ಇರದೇ ಅದು ವಿಚಿತ್ರ ಆಕೃತಿಯಲ್ಲಿ ಕಂಡುಬAದಿದೆ. ಇದೀಗ ಈ ವಿಚಿತ್ರ ಕೋಳಿ ಮೊಟ್ಟೆ ಅಚ್ಚರಿಗೆ ಕಾರಣವಾಗಿದೆ. ಕೆಲವೊಮ್ಮೆ ಕೋಳಿಗೆ ಕ್ಯಾಲ್ಸಿಯಂ ಕೊರತೆಯಾದಾಗ ಈ ರೀತಿಯ ಮೊಟ್ಟೆ ಸೃಷ್ಟಿಯಾಗುತ್ತದೆ ಎಂದು ಹೇಳಲಾಗಿದೆ.

-ಕ್ಯೂಟ್ ಕೂರ್ಗ್ ನ್ಯೂಸ್