ಸುಂಟಿಕೊಪ್ಪ, ಆ. ೧೧: ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾತಿ ಇಲ್ಲದೆ ವಶಪಡಿಸಿಕೊಂಡ ೬ ದ್ವಿಚಕ್ರ ವಾಹನಗಳನ್ನು ಬಹಿರಂಗ ಹರಾಜು ಮಾಡಲಾಯಿತು.
ನ್ಯಾಯಾಲಯದ ಆದೇಶ ಮೇರೆಗೆ ಅನೇಕ ವರ್ಷಗಳ ಹಿಂದೆ ಸುಂಟಿಕೊಪ್ಪ ಪೊಲೀಸರು ವಶಪಡಿಸಿಕೊಂಡಿದ್ದ ಯಮಹಾ ಬೈಕ್ ರೂ. ೩೮,೦೦೦, ಮತ್ತೊಂದು ಯಮಹಾ ರೂ. ೭,೩೦೦, ಸ್ಲೆöÊಂಡರ್ ರೂ. ೭,೧೦೦, ಸಮುರಾಯಿ ರೂ. ೨,೪೦೦, ಟಿವಿಎಸ್ ರೂ. ೨,೧೦೦ ಹಾಗೂ ಇನ್ನೂಂದು ಟಿವಿಎಸ್ ವಿಕ್ಟರ್ ರೂ. ೩,೩೦೦ ಹರಾಜಾಯಿತು.
ಠಾಣಾಧಿಕಾರಿ ಪಿ.ಎಸ್.ಪುನೀತ್, ಎ.ಎಸ್.ಐ. ಕಾವೇರಪ್ಪ, ಸಿಬ್ಬಂದಿಗಳಾದ ಸತೀಶ್, ಖಾದರ್ ರಹಮಾನ್ ಹಾಗೂ ಮತ್ತಿತರ ಸಿಬ್ಬಂದಿಗಳು ಇದ್ದರು.