ಚೆಯ್ಯಂಡಾಣೆ, ಆ. ೧೦: ಪ್ರಸಕ್ತ ಸಾಲಿನ ಸುನ್ನಿ ಜಂಇಯ್ಯತುಲ್ ಮುಅಲ್ಲಿ ಮೀನ್ ಮೂರ್ನಾಡು ವಲಯ ಮೂರ್ನಾಡಿನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಹನೀಫ್ ಸಖಾಫಿ ಕೊಂಡAಗೇರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಿದ್ಧೀಕ್ ಝುಹಿ, ಪ್ರಧಾನ ಕಾರ್ಯದರ್ಶಿಯಾಗಿ ಷÀಂಶುದ್ದೀನ್ ಅಮ್ಜದಿ, ಕೋಶಾಧಿಕಾರಿಯಾಗಿ ನಿಝಾರ್ ಅಹ್ಸನಿ ಅವರನ್ನು ಆಯ್ಕೆ ಮಾಡಲಾಯಿತು.

ಪರೀಕ್ಷಾ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಖಾದಿರ್, ಕಾರ್ಯದರ್ಶಿಯಾಗಿ ಅಬ್ದುಲ್ ಜಲೀಲ್ ಸಖಾಫಿ, ಮಿಶಿನರಿ ವಿಭಾಗದ ಅಧ್ಯಕ್ಷರಾಗಿ ರಿಯಾಝ್ ಫಾಲಿಲಿ, ಕಾರ್ಯದರ್ಶಿಯಾಗಿ ಅಬ್ದುಲ್ ಜಲೀಲ್ ಸಖಾಫಿ, ತರಬೇತಿ ವಿಭಾಗದ ಅಧ್ಯಕ್ಷರಾಗಿ ಹಸ್ಸನ್ ಸಅದಿ, ಕಾರ್ಯದರ್ಶಿಯಾಗಿ ಅಶ್ರಫ್ ಝೈನಿ, ನಿಯತಕಾಲಿಕಾ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ಲಾ ಮುಸ್ಲಿಯಾರ್, ಕಾರ್ಯದರ್ಶಿಯಾಗಿ ಅಬೂಮದನಿ, ವೆಲ್ಫೇರ್ ವಿಭಾಗದ ಅಧ್ಯಕ್ಷರಾಗಿ ಅಹ್ಮದ್ ಸಖಾಫಿ, ಕಾರ್ಯದರ್ಶಿಯಾಗಿ ಉನೈಸ್ ಸುಲ್ತಾನಿ ಅವರನ್ನು ಆಯ್ಕೆ ಮಾಡಲಾಯಿತು.