ಮಡಿಕೇರಿ, ಆ. ೯: ಮಡಿಕೇರಿ ವಿನ್ಸೆಂಟ್ ಕೌಂಪೌAಡ್ ಬಳಿ ರಾತ್ರಿ ರಸ್ತೆ ಬದಿಯಲ್ಲಿದ್ದ ಕರುವಿಗೆ ವಾಹನವೊಂದು ಡಿಕ್ಕಿಯಾಗಿ ಸ್ಥಳದಲ್ಲಿಯೇ ಕರು ಕೊನೆಯುಸಿರೆಳೆದಿದ್ದು, ಕಂದನ ಅಗಲಿಕೆ ತಾಳಲಾರದೇ ತಾಯಿ ಹಸು ಸ್ಥಳದಲ್ಲಿಯೇ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಘಟನಾ ಸ್ಥಳದಿಂದ ಕರುವಿನ ಮೃತದೇಹವನ್ನು ನಗರಸಭೆ ವತಿಯಿಂದ ಸ್ಥಳಾಂತರಿಸಲಾಗಿದ್ದು, ತಾ. ೧೦ ರಂದು (ಇಂದು) ಅಂತ್ಯಕ್ರಿಯೆ ನಡೆಸುವುದಾಗಿ ಆಯುಕ್ತ ರಾಮದಾಸ್ ತಿಳಿಸಿದ್ದಾರೆ.