ವೀರಾಜಪೇಟೆ, ಆ. ೯: ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದ ಕಾರ್ಮಿಕ ರೈತ ಕೂಲಿ ಕಾರ್ಮಿಕರ ಹಿತಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಮಿತಿಮೀರಿದ ಬೆಲೆ ಏರಿಕೆಯಿಂದ ಬಡ ಜನತೆ ಕಂಗಲಾಗಿದ್ದಾರೆ ಎಂದು ಆರೋಪಿಸಿ ಸಿ.ಐ.ಟಿ.ಯು ಸಂಘಟನೆ ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಸುಮಾರು ೧೩ ಬೇಡಿಕೆಗಳನ್ನು ಮುಂದಿಟ್ಟು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ನೇತೃತ್ವದಲ್ಲಿ ವೀರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಹೆಚ್.ಬಿ. ಪ್ರದೀಪ್ ಅವರಿಗೆ ಮನವಿ ಸಲ್ಲಿಸಿತು.
ಇದಕ್ಕಾಗಿ ೧೩ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಮನವಿಯಲ್ಲಿ ಸರಕಾರವನ್ನು ಆಗ್ರಹಿಸಲಾಗಿದೆ. ಈ ಸಂದರ್ಭ ಸಂಘಟನೆಯ ಉಪಾಧ್ಯಕ್ಷ ಡಾ. ಐ.ಆರ್. ದುರ್ಗಾಪ್ರಸಾದ್, ತಾಲೂಕು ಸಮಿತಿ ಕಾರ್ಯದರ್ಶಿ ರಾಚಪ್ಪ, ಖಜಾಂಚಿ ಹೆಚ್.ಪಿ. ರಮೇಶ್ ಮತ್ತು ಸದಸ್ಯರಾದ ಹೆಚ್.ಆರ್. ಶಿವಪ್ಪ, ಕುಟ್ಟಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.