ಡೋಮಿನೋಸ್ ಪಿಜ್ಜಾ ಅಂಗಡಿ ವಿರುದ್ಧ ದೂರು ದಾಖಲು
ಮಡಿಕೇರಿ, ಆ. ೯: ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಗರದ ಜಿ.ಟಿ. ವೃತ್ತದ ಬಳಿ ಇರುವ ಡೋಮಿನೋಸ್ ಪಿಜ್ಜಾ ಅಂಗಡಿ ವಿರುದ್ಧ ನಗರಸಭೆ ನೀಡಿದ ದೂರಿನನ್ವಯ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ದಿನ ರಾತ್ರಿ ೭.೩೦ ಗಂಟೆಗೆ ಆಹಾರ ಪದಾರ್ಥಗಳನ್ನು ಹೋಂ ಡೆಲಿವರಿ ನೀಡುವ ಬದಲು ಕೋವಿಡ್ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ ಅಂಗಡಿಯನ್ನು ತೆರೆದು ಸಾರ್ವಜನಿಕರನ್ನು ಕುಳ್ಳಿರಿಸಿಕೊಂಡು ಆಹಾರ ಪದಾರ್ಥ ವಿತರಿಸುತ್ತಿದ್ದ ಬಗ್ಗೆ ಬಂದ ದೂರಿನನ್ವಯ ನಗರಸಭಾ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಂಗಡಿಯ ವ್ಯವಸ್ಥಾಪಕ ನವೀನ್ ಎಂಬವರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.