*ವೀರಾಜಪೇಟೆ, ಆ. ೯: ಮಾದಕ ವಸ್ತು ಹೊಂದಿದ್ದ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿ ವಿರುದ್ಧ ಆರೋಪ ಸಾಬೀತಾಗಿದ್ದು, ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಮೊಹಮ್ಮದ್ ಆಲಿ ಎಂಬಾತನಿಗೆ ಶಿಕ್ಷೆಯ ಪ್ರಮಾಣವನ್ನು ತಾ.೧೧ರಂದು ಪ್ರಕಟಿಸಲಿದೆ.
ವೀರಾಜಪೇಟೆ ನಗರ ಠಾಣಾಧಿಕಾರಿ ಜೆ.ಕೆ. ಸುಬ್ರಮಣಿ ಅವರು ೨೦೧೫ ಜುಲೈ ೨೪ ರಂದು ಕಲ್ಲು ಬಾಣೆಯಲ್ಲಿರುವ ಮೊಹಮ್ಮದ್ ಆಲಿ ಮನೆಯ ಮೇಲೆ ದಾಳಿ ನಡೆಸಿದಾಗ ೧ ಕೆ.ಜಿ ೨೫೦ ಗ್ರಾಂ. ತೂಕದ ಮಾದಕ ವಸ್ತು ಪತ್ತೆಯಾಗಿದ್ದ ಹಿನ್ನೆಲೆ ಆತನÀ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬAಧ ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಜಾಮೀನಿನ ಮೇಲೆ ಹೊರಬಂದಿದ್ದ ಮೊಹಮದ್ ಆಲಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಇಂದು ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.