ಸಿದ್ದಾಪುರ, ಆ. ೮: ರಸ್ತೆ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ರಸ್ತೆಯಲ್ಲಿದ್ದ ಗುಂಡಿಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಗ್ರಾಮಸ್ಥರು ಪ್ರತಿಭಟಿಸಿದರು. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ೭ನೇ ವಾರ್ಡ್ನಲ್ಲಿರುವ ಬೆಟ್ಟದಕಾಡು ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ನೂರಾರು ಮಂದಿ ದಿನನಿತ್ಯ ಓಡಾಡುತ್ತಾರೆ. ಆದರೆ, ರಸ್ತೆಯು ಹೊಂಡ - ಗುಂಡಿಗಳಿAದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ೭ನೇ ವಾರ್ಡ್ನ ನಿವಾಸಿಗಳು ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಿ ಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ೭ನೇ ವಾರ್ಡ್ನ ನಿವಾಸಿ ರಶಾದ್ ಈ ಭಾಗದಲ್ಲಿರುವ ಸಾರ್ವಜನಿಕ ರಸ್ತೆಯು ಕಳೆದ ೪ ವರ್ಷಗಳಿಂದ ದುರಸ್ತಿಯಲ್ಲಿದ್ದು, ಈ ಬಗ್ಗೆ ಗ್ರಾ.ಪಂ. ಆಗಲಿ, ಇತರ ಜನಪ್ರತಿನಿಧಿಗಳಾಗಲಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸದೇ ನಿರ್ಲಕ್ಷö್ಯ ವಹಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ತುರ್ತಾಗಿ ಆಸ್ಪತ್ರೆ ಇನ್ನಿತರ ಕೆಲಸ ಕಾರ್ಯ ಗಳಿಗೆ ತೆರಳಲು ಸಮಸ್ಯೆಯಾಗಿದೆ.

ಮುಂದಿನ ವಾರದೊಳಗೆ ರಸ್ತೆಯನ್ನು ದುರಸ್ತಿಪಡಿಸದಿದ್ದಲ್ಲಿ ಗ್ರಾಮಸ್ಥರನ್ನು ಸೇರಿಸಿ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ನಿವಾಸಿ ಗಳಾದ ಸೈದಲವಿ, ಜಂಶೀರ್, ಕುಟ್ಟನ್, ಸುರೇಶ್, ಇಸ್ಮಾಯಿಲ್, ಶಫೀಕ್ ಇನ್ನಿತರರು ಹಾಜರಿದ್ದರು. -ವಾಸು