ಮಡಿಕೇರಿ, ಆ. ೭: ಪ್ರಸ್ತುತ ರಾಜ್ಯದಲ್ಲಿ ಹೊಸದಾಗಿ ಪುನರ್ರಚನೆ ಗೊಂಡ ಬಿಜೆಪಿ ಸರಕಾರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತನಗೆ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತವಾಗಿತ್ತು. ಜಿಲ್ಲಾ ಪ್ರಾತಿನಿಧ್ಯ ಜಾತಿಯ ಆಧಾರದಲ್ಲೂ ಅಲ್ಪ ಸಂಖ್ಯಾತರಾಗಿರುವ ಕೊಡವ ಜನಾಂಗಕ್ಕೆ ಈ ಬಾರಿ ಅವಕಾಶ ಸಿಗಬೇಕಾಗಿದ್ದು, ಇದಕ್ಕೆ ಮೇಲ್ಮಟ್ಟ ದಿಂದ ಒಪ್ಪಿಗೆಯೂ ದೊರೆತಿತ್ತು. ಆದರೆ, ನಮ್ಮವರೇ ಇದಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂಬುದು ಇದೀಗ ಅರಿವಾಗಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ತಾವು ಈ ಹಿಂದಿನಿAದಲೂ ಸಹಕರಿಸಿಕೊಂಡು ಬಂದವರೇ ತಮಗೆ ಅಡ್ಡಿ ಮಾಡಿರುವ ವಿಚಾರ ತಿಳಿದುಬಂದಿದ್ದು, ಇದು ತೀರಾ ಬೇಸರ ಮೂಡಿಸಿದೆ. ಪಕ್ಷಕ್ಕೆ ಆರಂಭದಿAದಲೂ ತಾವು ಎಲ್ಲಾ ರೀತಿಯಲ್ಲೂ ದುಡಿದಿದ್ದು, ಪಕ್ಷ ಸಂಘಟನೆಯಲ್ಲಿ ಶ್ರಮ ವಹಿಸಿದ್ದೇನೆ. ಆದರೆ, ಐದು ಬಾರಿ ಶಾಸಕರಾದರೂ ಸಚಿವ ಸ್ಥಾನ ನೀಡದಿರುವುದು ವಿಷಾದಕರ ಎಂದು ಅವರು ಹೇಳಿದ್ದಾರೆ.
ಸದ್ಯ ಮುಂದಿನ ದಿನದಲ್ಲಿ ಇನ್ನುಳಿದಿರುವ ನಾಲ್ಕು ಸ್ಥಾನದ ಪೈಕಿ ಓರ್ವರಾಗಿ ತಮ್ಮನ್ನು ಪರಿಗಣಿಸುವ ಆಶಾಭಾವನೆ ಇದೆ. ಪಕ್ಷ ತಮ್ಮ ಸೇವೆಯನ್ನು ಅರ್ಥೈಸಿಕೊಳ್ಳುವ ವಿಶ್ವಾಸವಿದ್ದು, ಇದಕ್ಕೆ ಕಾದು ನೋಡುವುದಾಗಿ ರಂಜನ್ ನುಡಿದರು. ಅಡ್ಡಗಾಲು ಹಾಕಿದವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ಅವರಿಗೆ ಆರಂಭದಿAದಲೂ ತಾನು ಮಾತ್ರ ಸಹಕಾರ ನೀಡಿಕೊಂಡೇ ಬಂದಿರುವೆ ಎಂದಷ್ಟೇ ಹೇಳಿದರು.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕ ಅಪ್ಪಚ್ಚು ರಂಜನ್ ಅವರು ದೃಶ್ಯ ಮಾದ್ಯಮಗಳೊಂದಿಗೆ ಹಂಚಿಕೊAಡ ಅನಿಸಿಕೆ ಮಾದ್ಯಮಗಳಲ್ಲಿ ಪ್ರಸಾರ ಗೊಳ್ಳುವುದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಅವರ ಮಾತುಗಳು ಹೀಗಿವೆ:-
‘‘ಗೆಲ್ಲಿಸಿದ್ದೇ ತಪ್ಪಾಯ್ತ’’?
ನಮ್ಮ ಸರ್ಕಾರ ಮಂತ್ರಿಗಳನ್ನು ಮಾಡಿದಂತ ಸಂದರ್ಭದಲ್ಲಿ ನಾವು ಸಾಮಾಜಿಕ ನ್ಯಾಯವನ್ನು ಕಾಪಾಡ್ತೇವೆ ಅಂತ ಹೇಳುವಂತ ಮಾತನ್ನ ಹೇಳಿದ್ರು. ಜಿಲ್ಲಾವಾರು, ಸಾಮಾಜಿಕ ನ್ಯಾಯ, ಜಾತಿವಾರು ಕೊಡುವಂತ ವ್ಯವಸ್ಥೆಯನ್ನು ಮಾಡ್ತಿವಿ ಅಂತ ಹೇಳಿದ್ರು. ಆದ್ರೆ ಇವತ್ತು ಅದನ್ನ ಏನೂ ಪಾಲನೆ ಮಾಡಿಲ್ಲ. ನಮ್ಮ ಕೊಡಗು ಜಿಲ್ಲೆಯನ್ನು ‘ಟೇಕ್ ಇಟ್ ಯಾಸ್ ಗ್ರಾö್ಯಂಟೆಡ್’ ಅಂತ ಹೇಳುವಂತದನ್ನು ತೀರ್ಮಾನ ಮಾಡ್ಕೊಂಡಿದ್ದಾರೆ ಅಂತಾ ನನಿಗೆ ಅನ್ನಿಸ್ತದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಜಿಲ್ಲೆ ಅಂತ ಹೇಳಿದ್ರೆ ಅದು ಕೊಡಗು. ಮೊನ್ನೆ ನಡೆದಂತ ಚುನಾವಣೆ ರ್ಬೋದು, ಪುರಸಭಾ ಚುನಾವಣೆ ಇಡೀ ಕರ್ನಾಟಕದಲ್ಲಿ ೮ ಕಡೆ
(ಮೊದಲ ಪುಟದಿಂದ) ಚುನಾವಣೆ ನಡೆದ್ರೆ ೭ ಕಡೆ ಬಿಜೆಪಿ ಸೋತಿದೆ. ಮಡಿಕೇರಿದು ಮಾತ್ರ ನಾವು ‘ಅಬ್ಸಲ್ಯುಟ್ ಮೆಜಾರಿಟಿ’ಯಲ್ಲಿ ಗೆಲ್ಲಿಸುವಂತ ವ್ಯವಸ್ಥೆ ಮಾಡಿದ್ದೇವೆ. ಅದೇ ತಪ್ಪಾಯ್ತ ಅಂತ ನನಗೆ ಅನ್ನಿಸ್ತದೆ.
ರಂಜನ್ ಹೇಳಿದ ಬೇತಾಳದ ಕಥೆ
ನಾನೊಂದು ಬೇತಾಳನ ಬೆನ್ನಿಗೆ ಕಟ್ಟಿಕೊಂಡ್ಬಿಟ್ಟಿದ್ದೀನಿ. ಹಲವಾರು ವರ್ಷಗಳಿಂದ. ಚೆನಾಗಿ ಬೆಳೆದು ಬಿಟ್ಟಿದೆ. ಆ ಬೇತಾಳ ಇವತು ನನಿಗೇ ತಲೆಗೆ ಹೊಡಿಲಿಕೆ ಶುರು ಮಾಡಿದೆ. ಅಂಗೆ ಆಗಿ ಕೂಡ ಪ್ರಾಬ್ಲಂ ಆಗಿದೆ. ನಾನೇ ಬೆನ್ನಿಗೆ ಕಟ್ಕೊಂಡು ಬಂದೆ ಬೇತಾಳನ. ಅದು ನನಿಗಿಂತ ಬೇರೆ ಎತ್ತರ ಬೆಳೆದು ಬಿಡ್ತು. ನಾನು ಬೆಳೆಸಿದ್ದೆ. ನನಗೆ ಗೊತ್ತಿಲ್ಲ ಬೇತಾಳನ ಬೆಳೆಸಬಾರದು ಅಂತ. ಬೆಳೆಸಿಬಿಟ್ಟೆ ಈಗ ನಮಿಗೆ ತಲೆಗೆ ಹೊಡೆಯುವಂತ ಕೆಲಸ ಆಗಿದೆ. ಆದರೆ ನನಗೆ ಡೆಲ್ಲಿಯ ಹೈಕಮಾಂಡ್ನಿAದ ಮೂರು ಜನರು ಫೋನ್ ಮಾಡಿ ‘ನಿಂದು ಕ್ಲೀಯರ್ ಆಗಿದೆ’ ಅಂತ ಹೇಳಿದಾರೆ. ಬೆಂಗ್ಳೂರಿಗೆ ಹೋದಾಗ ಬೆಂಗ್ಳೂರಿನಲ್ಲಿ ನನ್ನ ಹೆಸರು ತೆಗೆಯುವಂತಹ ವ್ಯವಸ್ಥೆ ಕೂಡ ಆಗಿದೆ. ಅವತ್ತು ಪಕ್ಷ ಬೆಳೆಸ್ಲಿಕೆ ಯಾರು ಕೂಡ ಇರಲಿಲ್ಲ. ಬಹಳ ಕಷ್ಟದಲ್ಲಿದ್ದ ಸಂದರ್ಭದಲ್ಲಿ ಪಕ್ಷವನ್ನು ಹಾಗೂ ಎಲ್ಲಾ ರೀತಿಯ ಸಹಕಾರವನ್ನು ಕೊಡುವಂತ ಕೆಲಸವನ್ನು ನಾವು ಮಾಡಿದ್ದೇವೆ. ನನಿಗೆ ಜಿಲ್ಲೆವಾರು ಕೊಡ್ತೇವೆ ಅಂತ ಹೇಳಿದ್ರು ಕೂಡ ಇವತ್ತು ಮಂಗ್ಳೂರಿಗೆ ಮೂರು ಕೊಟ್ಟಿದ್ದಾರೆ; ಬೆಂಗ್ಳೂರಿಗೆ ೮ ಪೋಸ್ಟ್ ಕೊಟ್ಟಿದಾರೆ. ಬೆಳಗಾಂಗೆ ೫ ಕೊಟ್ಟಿದಾರೆ. ಶಿವಮೊಗ್ಗಕ್ಕೆ ೩ ಕೊಟ್ಟಿದಾರೆ. ಕೊಡಗಿಗೆ ಏಕೆ ಜಿಲ್ಲಾವಾರು ಕೊಡಲಿಲ್ಲ? ನಮ್ಮ ಇವತ್ತು ಕೊಡಗು ಇರಬಹುದು ಮೈಸೂರು ಇರಬಹುದು ಚಿಕ್ಕಮಂಗಳೂರು ಇರಬಹುದು ಹಾಸನ ಇರಬಹುದು ಚಾಮರಾಜನಗರ ಇರಬಹುದು ಇದಿಷ್ಟಕ್ಕೂ ಕೂಡ ಒಂದೇ ಒಂದು ಮಂತ್ರಿಯನ್ನು ಕೊಡುವಂತ ಕೆಲಸ ಕೂಡ ಮಾಡ್ಲಿಲ್ಲ. ನಾವು ಎಂಪಿ ಚುನಾವಣೆಲಿ ಸುಮಾರು ೮೦ ಸಾವಿರಕ್ಕಿಂತ ಹೆಚ್ಚು ಮತವನ್ನ ನಾವು ಲೀಡ್ ಕೊಟ್ಟಿದ್ದೇವೆ. ಎಂಪಿಯವರು ಮೌನಕ್ಕೆ ಜಾರಿದ್ದಾರೆ. ಯಾವುದೇ ವಿಚಾರ ಮಾತಾಡ್ಲಿಲ್ಲ. ಎಂಪಿಯವರು ಚಿಂತನೆಯನ್ನು ಕೂಡ ಮಾಡ್ಬೇಕಾಗಿತ್ತು. ಕೊಡಗಿನಲ್ಲಿ ಐದು ಟರ್ಮ್ ಗೆದ್ದಂತವರಿದ್ದಾರೆ. ೪ ಟರ್ಮ್ ಗೆದ್ದಂತವರಿದ್ದಾರೆ. ಯಾರಿಗಾದರೂ ಮಂತ್ರಿ ಸ್ಥಾನ ಕೊಡಬೇಕು. ಕೊಡಿಸಬೇಕು ಅಂತ ಚಿಂತನೆಯನ್ನು ಮಾಡ್ಬೇಕಿತ್ತು ಅವರು ಕೂಡ ಮಾಡ್ಲಿಲ್ಲ. ಆದ್ರಿಂದ ಬಹಳಷ್ಟು ಬೇಸರ ಆಗಿದೆ ನನಿಗೆ ಈ ರೀತಿಯಲ್ಲಿ ನಮ್ಮನ್ನ ಕಡೆಗಣಿಸಿದಾರೆ ಅಂತ ಹೇಳೋದು... ಇವತ್ತು ಕೊಡಗಿನ ಜನತೆಗೆ ಬಹಳಷ್ಟು ಬೇಸರ ಆಗಿದೆ. ಎಲ್ಲಾ ಕೊಡಗಿನ ಜನತೆ ಕೂಡ ತಾವು ನೋಡರ್ಬೋದು ನನಿಗೆ ಹಲವಾರು ಜನ ಮಾತನಾಡುವಂತ ಸಂದರ್ಭದಲ್ಲಿ ಹೇಳ್ತಾ ಇದ್ರು ನಾವು ಕೊಡಗು ರಾಜ್ಯ ‘ಸಪ್ರೆಟ್’ ತಗೊಳುವ ಅಂತ ಹೇಳುವಂತ ವಿಚಾರವನ್ನು ಕೂಡ ಹೇಳುವಂತ ಕೆಲ್ಸವನ್ನು ಮಾಡಿದ್ರು. ನಾವು ೫೬ರಲ್ಲಿ ಬೇರೆ ರಾಜ್ಯ ಇದ್ದವ್ರು. ಈಗ ಅದೇ ಸ್ಥಿತಿಗೆ ನಾವು ಹೋಗೋದು ಒಳ್ಳೆಯದು, ಇವತ್ತು ಯಾರೇ ಮುಖ್ಯಮಂತ್ರಿ ಬಂದ್ರೂ ಕೂಡ ಕೊಡಗಿಗೆ ಮಳೆ ಬಿತ್ತಾ ಮಳೆ ಬಿತ್ತಾ ಅಂತ ಕೇಳ್ತಾರೆ. ಬಹಳಷ್ಟು ನೀರನ್ನು ಕೊಡ್ತೆವೆ ನಾವು ಕೊಳ್ತೋಗ್ತೇವೆ. ಆದ್ರು ಕೂಡ ಕೊಡಗಿಗೊಂದು ಗೌರವದ ಸ್ಥಾನ ಕೊಡ್ಲಿಲ್ಲ ಅಂತ ಹೇಳಿದ್ರೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀಳ್ತದೆ ಯಾಕಂದ್ರೆ ಎಲ್ಲರೂ ಬೇಸತ್ತು ಹೋಗಿಬಿಟ್ಟಿದ್ದಾರೆ. ಎಲ್ಲಾ ವರ್ಗದವರೂ ಕೂಡ ಕೊಡಗಿನ ಎಲ್ಲಾ ಜನ ಕೂಡ ಬೇಸರ ಆಗಿದೆ; ನಮಿಗೆ ಮಂತ್ರಿ ಕೊಡ್ಲಿಲ್ಲ ‘ಕನ್ಸಿಡರ್’ ಮಾಡ್ಲಿಲ್ಲ ಅಂತ ಎಲ್ಲರಿಗೂ ಕೂಡ ಬೇಸರ ಆಗಿದೆ. ಹಾಗಾಗಿ ಮುಂದಿನ ೧೫ ದಿವಸಗಳಲ್ಲಿ ಕೊಡ್ತಿವಿ ಅಂತ ಹೇಳ್ತಾರೆ.೧೫ ದಿವಸಗಳಲ್ಲಿ ಆಗುತ್ತಾ ಹಾಗಾಗಿ ಕಾದು ನೋಡ್ತೇವೆ.