ಟೋಕಿಯೋ, ಆ. ೭: ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ನಲ್ಲಿ ಜಾವಲೀನ್ ಥ್ರೋ ಪಂದ್ಯಾಟದಲ್ಲಿ ಭಾರತದ ಸುಬೇದಾರ್ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಇದು ಮೊದಲನೆಯ ಚಿನ್ನವಾಗಿದ್ದು, ಭಾರತದ ಒಲಂಪಿಕ್ಸ್ ಇತಿಹಾಸದಲ್ಲೇ ವೈಯಕ್ತಿಕ ಚಿನ್ನದ ಪದಕ ಪಡೆದ ಎರಡನೆಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
೨೦೦೮ರಲ್ಲಿ ಚೀನಾದ ಬೀಜಿಂಗ್ ನಲ್ಲಿ ೧೦ಮೀಟರ್ ಶೂಟಿಂಗ್ನಲ್ಲಿ ಅಭಿನವ್ ಬಿಂದ್ರ ಚಿನ್ನದ ಪದಕ ಗೆದ್ದು ಭಾರತದ ಏಕೈಕ ವೈಯಕ್ತಿಕ ಚಿನ್ನದ ಪದಕ ವಿಜೇತರೆನಿಸಿಕೊಂಡಿದ್ದರು. ಇಂದು ನೀರಜ್ ಅವರ ಅತ್ಯುತ್ತಮ ಜಾವಲೀನ್ ಎಸೆತದಿಂದಾಗಿ ಭಾರತಕ್ಕೆ ೨ನೇ ವೈಯಕ್ತಿಕ ಚಿನ್ನ ದೊರೆತಂತಾಗಿದೆ.
ಜಾವಲೀನ್ಅನ್ನು ೮೭.೫೮ ಮೀಟರ್ ದೂರ ಎಸೆಯುವ ಮೂಲಕ ಮೊದ¯ನೆಯ ಸ್ಥಾನವನ್ನು ನೀರಜ್ ಅವರು ಪಡೆದುಕೊಂಡರು. ೨ ಹಾಗೂ ೩ನೇ ಸ್ಥಾನಗಳನ್ನು ಚೆಕ್ ರಿಪಬ್ಲಿಕ್ ರಾಷ್ಟçದ ಕ್ರೀಡಾಪಟುಗಳು ಪಡೆದುಕೊಂಡರು.
ಹರ್ಯಾಣ ಸರಕಾರದಿಂದ ೬ ಕೋಟಿ ಬಹುಮಾನ
ಕ್ರೀಡಾಪಟುವನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹರ್ಯಾಣ ಸರಕಾರ ಭರ್ಜರಿ ರೂ. ೬ ಕೋಟಿ ಬಹುಮಾನವನ್ನು ಚೋಪ್ರಾ ಅವರಿಗೆ ಘೋಷಿಸಿತು. ಚಿನ್ನದ ಪದಕ ಗೆದ್ದ ಸುದ್ದಿ ಹಬ್ಬುತ್ತಿದ್ದಂತೆ ನೀರಜ್ ಚೋಪ್ರಾ ಅವರ ಹುಟ್ಟೂರು ಹರ್ಯಾಣದ ಕಾಂದ್ರ ಗ್ರಾಮದಲ್ಲಿ ಸೇರಿದಂತೆ ಭಾರತದ ಇತರೆಡೆಗಳಲ್ಲಿ ಸಂಭ್ರಮಾಚರಣೆ ಪ್ರಾರಂಭವಾಯಿತು. ತಮ್ಮ ಹುಟ್ಟೂರಿನಲ್ಲಿ ಸಾರ್ವಜನಿಕರು ಒಂದೆಡೆ ಸೇರಿ ಸಿಹಿ ಹಂಚಿ ಸಂಭ್ರಮಿಸಿದರು.