ಮಡಿಕೇರಿ, ಆ. ೭: ಕೇರಳ ಮತ್ತು ಮಹರಾಷ್ಟç ರಾಜ್ಯಗಳಿಗೆ ಹೊಂದಿಕೊAಡಿರುವ ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಕೊಡಗು ಗಡಿಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮಧ್ಯಾಹ್ನ ೨ ಗಂಟೆಯ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು. ನಿಗದಿತ ಸಮಯದ ಬಳಿಕ ವ್ಯಾಪಾರೋದ್ಯಮವೂ ಸ್ತಬ್ಧವಾಯಿತು.
ಕೇರಳ ಗಡಿಗಳಾದ ಮಾಕುಟ್ಟ, ಕುಟ್ಟ, ಕರಿಕೆ ಸೇರಿದಂತೆ ಅಂತರಜಿಲ್ಲಾ ಗಡಿಗಳಾದ ಕುಶಾಲನಗರ, ಆನೆಚೌಕೂರು, ಶಿರಂಗಾಲ, ಕೊಡಗು-ಹಾಸನ ಚೆಕ್ಪೋಸ್ಟ್ನಲ್ಲಿ ಬಿಗಿನಿಯಮಗಳನ್ನು ಕೈಗೊಳ್ಳಲಾಗಿತ್ತು. ಕೇರಳದಿಂದ ಜಿಲ್ಲೆಗೆ ಆಗಮಿಸಿದ ವಾಹನಗಳನ್ನು ಚೆಕ್ಪೋಸ್ಟ್ನಲ್ಲಿ ತಡೆಹಿಡಿದು ಪೊಲೀಸರು ವಾಪಸ್ ಕಳುಹಿಸಿದರು. ಹೊರಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆಯಲಾಯಿತು. ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಚಾಲಕರು ೭೨ ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಚೆಕ್ಪೋಸ್ಟ್ನಲ್ಲಿ ಸಲ್ಲಿಸಬೇಕಾಗಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯಾದ್ಯಂತ ಮಧ್ಯಾಹ್ನ ೨ ಗಂಟೆಯ ತನಕ ಅಗತ್ಯ ವಸ್ತು ಖರೀದಿಯಲ್ಲಿ ಜನರು ತೊಡಗಿಸಿಕೊಂಡರು. ಮೀನು, ಮಾಂಸ ಖರೀದಿ ಜೋರಾಗಿತ್ತು. ನಿಗದಿತ ಸಮಯ ಕಳೆದ ನಂತರ ಅಂಗಡಿಗಳು ಮುಚ್ಚಲ್ಪಟ್ಟವು. ಮಡಿಕೇರಿಯಲ್ಲಿ ಮಧ್ಯಾಹ್ನದ ತನಕ ವಾಹನ ದಟ್ಟಣೆ ಕಂಡುಬAತು. ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ ೨ ರ ತನಕ ಅವಕಾಶವಿದ್ದರೂ ಕೂಡ ಗ್ರಾಹಕರ ಸಂಖ್ಯೆ ಕ್ಷೀಣವಾಗಿತ್ತು. ವಾಹನ ಸಂಚಾರ ಕೂಡ ಇಳಿಮುಖವಾಗಿತ್ತು. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕೊಡಗಿನ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ರಾಜಾಸೀಟ್, ಮಾಂದಲಪಟ್ಟಿ, ಅಬ್ಬಿಫಾಲ್ಸ್ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಆದರೆ ಮಡಿಕೇರಿಯ ಕೋಟೆ ಒಳಗಿರುವ ಸರ್ಕಾರಿ ಮ್ಯೂಸಿಯಂ ಮಾತ್ರ ಕಾರ್ಯಾಚರಿಸುತ್ತಿತ್ತು. ಅಲ್ಲದೆ ವಸ್ತು ಸಂಗ್ರಹಾಲಯ ವೀಕ್ಷಣೆಗೂ ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು. ಮ್ಯೂಸಿಯಂ ಕಚೇರಿ ಮುಚ್ಚುವಂತೆ ಆದೇಶ ಬಂದಿಲ್ಲ. ಆದೇಶ ಬಂದ ಬಳಿಕ ಮುಚ್ಚಲಾಗುವುದು ಎಂದು ಸಿಬ್ಬಂದಿ ಸಬೂಬು ನೀಡಿದರು. ನಿಗದಿಯಂತೆ ಸಭೆ-ಸಮಾರಂಭಗಳು ನಿಗದಿತ ಜನರ ನಡುವೆ ನಡೆಯಲು ಅವಕಾಶ ಕಲ್ಪಿಸಲಾಗಿತ್ತು.
ಸರಕಾರ ಕೈಗೊಂಡ ದಿಢೀರ್ ಕ್ರಮದಿಂದ ಜನರು ಗೊಂದಲಕ್ಕೆ ಒಳಗಾದರು. ಬೇರೆ ಜಿಲ್ಲೆ, ರಾಜ್ಯದಿಂದ ಕೊಡಗಿಗೆ ಬಂದವರು ತಮ್ಮ ಊರುಗಳಿಗೆ ತೆರಳಲಾಗದೆ ಪರದಾಡಿದರು. ವರ್ತಕರು ಕೂಡ ಅಂಗಡಿ ತೆರೆಯಬೇಕೋ, ಬೇಡವೋ ಎಂಬ ಗೊಂದಲಕ್ಕೆ ಒಳಗಾದರು.
(ಮೊದಲ ಪುಟದಿಂದ)
ಕರಿಕೆಯಲ್ಲಿ ತೀವ್ರ ನಿಗಾ
ಕರಿಕೆ : ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕೊಡಗಿನ ಪ್ರಮುಖ ಚೆಕ್ಪೋಸ್ಟ್ಗಳಲ್ಲಿ ಒಂದಾದ ಕರಿಕೆ ಚೆಕ್ಪೋಸ್ಟ್ ಮೂಲಕ ಕೇರಳ ರಾಜ್ಯದಿಂದ ಯಾವುದೇ ವಾಹನ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ವಾಹನಗಳು ಕೂಡ ಕೇರಳದಿಂದ ಆಗಮಿಸಲಿಲ್ಲ. ಚೆಕ್ಪೋಸ್ಟ್ ಗೇಟ್ ಬಂದ್ ಮಾಡಲಾಗಿದ್ದು, ಗ್ರಾಮದ ಸ್ಥಳೀಯರು ತುರ್ತು ಅಗತ್ಯಕ್ಕೆ ಪಾಣತ್ತೂರುಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಮಾತ್ರ ಬಿಡಲಾಗುತ್ತಿದೆ. ಅಲ್ಲದೇ ಶುಕ್ರವಾರ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಹ ಹಾಗೂ ಕೋವಿಡ್ ನಿಯಂತ್ರಣ ಬಗ್ಗೆ ಸಭೆಯಲ್ಲಿ ಕ್ಷೇತ್ರದ ಶಾಸಕ ಬೋಪಯ್ಯ ಜಿಲ್ಲೆಯ ಗಡಿಯಲ್ಲಿ ತಪಾಸಣೆಯ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದ ಇಂದಿನಿAದ ಇನ್ನಷ್ಟು ಕಟ್ಟುನಿಟ್ಟಾಗಿ ತಪಾಸಣೆ ಕೈಗೊಳ್ಳಲಾಗಿತ್ತು.(ಮೊದಲ ಪುಟದಿಂದ)
ಕರಿಕೆಯಲ್ಲಿ ತೀವ್ರ ನಿಗಾ
ಕರಿಕೆ : ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕೊಡಗಿನ ಪ್ರಮುಖ ಚೆಕ್ಪೋಸ್ಟ್ಗಳಲ್ಲಿ ಒಂದಾದ ಕರಿಕೆ ಚೆಕ್ಪೋಸ್ಟ್ ಮೂಲಕ ಕೇರಳ ರಾಜ್ಯದಿಂದ ಯಾವುದೇ ವಾಹನ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ವಾಹನಗಳು ಕೂಡ ಕೇರಳದಿಂದ ಆಗಮಿಸಲಿಲ್ಲ. ಚೆಕ್ಪೋಸ್ಟ್ ಗೇಟ್ ಬಂದ್ ಮಾಡಲಾಗಿದ್ದು, ಗ್ರಾಮದ ಸ್ಥಳೀಯರು ತುರ್ತು ಅಗತ್ಯಕ್ಕೆ ಪಾಣತ್ತೂರುಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಮಾತ್ರ ಬಿಡಲಾಗುತ್ತಿದೆ. ಅಲ್ಲದೇ ಶುಕ್ರವಾರ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಹ ಹಾಗೂ ಕೋವಿಡ್ ನಿಯಂತ್ರಣ ಬಗ್ಗೆ ಸಭೆಯಲ್ಲಿ ಕ್ಷೇತ್ರದ ಶಾಸಕ ಬೋಪಯ್ಯ ಜಿಲ್ಲೆಯ ಗಡಿಯಲ್ಲಿ ತಪಾಸಣೆಯ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದರಿಂದ ಇಂದಿನಿAದ ಇನ್ನಷ್ಟು ಕಟ್ಟುನಿಟ್ಟಾಗಿ ತಪಾಸಣೆ ಕೈಗೊಳ್ಳಲಾಗಿತ್ತು.ಕುಟ್ಟ ಚೆಕ್ಪೋಸ್ಟ್ನಲ್ಲಿ ಬಿಗಿ ಬಂದೋಬಸ್ತ್
ಗೋಣಿಕೊಪ್ಪಲು : ಕೊಡಗು ಜಿಲ್ಲೆಯ ಗಡಿಭಾಗದ ಕುಟ್ಟ ಬಳಿ ಇರುವ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಗಡಿಭಾಗದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಆದೇಶ ನೀಡಿದ ತರುವಾಯ ಕುಟ್ಟ ಗಡಿಯಲ್ಲಿ ತೀವ್ರ ಬಿಗಿ ಕ್ರಮವಹಿಸಲಾಗಿದೆ.
ಕೇರಳ, ಮಾನಂದವಾಡಿ ಕಡೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವ ವಾಹನಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬAದು. ಆ್ಯಂಬ್ಯುಲೆನ್ಸ್ ಹೊರತುಪಡಿಸಿ ಕೇರಳ ರಾಜ್ಯದಿಂದ ಆಗಮಿಸುತ್ತಿದ್ದ ಎಲ್ಲಾ ವಾಹನಗಳನ್ನು ಪೊಲೀಸರು ವಾಪಾಸು ಕಳುಹಿಸಿದರು.
ಜಿಲ್ಲಾಡಳಿತ ಸೂಚನೆ ಮೇಲೆ ಗಡಿಯಲ್ಲಿ ಪೊಲೀಸರು, ರೆವಿನ್ಯೂ ಅಧಿಕಾರಿಗಳು, ಪಂಚಾಯಿತಿ ನೌಕರರು ಹಾಗೂ ಆರೋಗ್ಯ ಸಹಾಯಕರು ದಿನದ ೨೪ ಗಂಟೆ ಎರಡು ಪಾಳೆಯಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿವೈಎಸ್ಪಿ ಜಯಕುಮಾರ್ ಕೊಡಗಿನ ಗಡಿಭಾಗವಾದ ಮಾಕುಟ್ಟ, ಆನೆಚೌಕೂರು ಹಾಗೂ ಕುಟ್ಟ ಚೆಕ್ಪೋಸ್ಟ್ಗಳಿಗೆ ಖುದ್ದಾಗಿ ತೆರಳಿ ವಿವರ ಪಡೆದರು. ಚೆಕ್ಪೋಸ್ಟ್ಗೆ ಡಿವೈಎಸ್ಪಿ ಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಸುಬ್ಬಯ್ಯ, ಇತರ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.
ಗುಡ್ಡೆಹೊಸೂರು: ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆ ಗುಡ್ಡೆಹೊಸೂರಿನಲ್ಲಿ ಮಧ್ಯಾಹ್ನ ೨ ಗಂಟೆಯ ನಂತರ ವಾಹನ ಸಂಚಾರ ಮತ್ತು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಕೇವಲ ಔಷಧಿ ಅಂಗಡಿ ಮಾತ್ರ ತೆರೆದಿತ್ತು. ಗುಡ್ಡೆಹೊಸೂರು ಗ್ರಾಮ ವ್ಯಾಪ್ತಿಯ ಪ್ರವಾಸಿ ಸ್ಥಳಗಳಿಗೆ ಯಾವುದೇ ಪ್ರವಾಸಿಗರು ಸುಳಿಯಲಿಲ್ಲ. ಮಧ್ಯಾಹ್ನ ೨ ಗಂಟೆಯಾಗುತ್ತಲೆ ಸ್ವಇಚ್ಚೆಯಿಂದ ಅಂಗಡಿ ಬಾಗಿಲು ಹಾಕಿದರು, ಈ ಸಂದÀರ್ಭ ಡಿ,ವೈ.ಎಸ್.ಪಿ. ಶೈಲೇಂದ್ರ, ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು. ಪೊನ್ನಂಪೇಟೆ : ಪೊನ್ನಂಪೇಟೆಯಲ್ಲಿ ವಾರಾಂತ್ಯದ ಲಾಕ್ ಡೌನ್ ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಮಧ್ಯಾಹ್ನ ೨ ಗಂಟೆಯ ನಂತರ ಮೆಡಿಕಲ್ ಶಾಪ್ ಹೊರತುಪಡಿಸಿ ಎಲ್ಲಾ ರೀತಿಯ ಅಂಗಡಿ-ಮುAಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಮಳೆಯಿದ್ದ ಕಾರಣ ಜನರ ಓಡಾಟ ಕಡಿಮೆ ಇತ್ತು. ವಾಹನ ಸಂಚಾರ ವಿರಳವಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನ ೨ ಗಂಟೆಯ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಶ್ರೀಮಂಗಲ ಸಮೀಪದ ಇರ್ಪು ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದ ಕಾರಣ, ಪ್ರವಾಸಿಗರು ನಿರಾಸೆಯಿಂದ ವಾಪಾಸ್ ತೆರಳಿದರು.
ಶನಿವಾರಸಂತೆ : ವಾರಾಂತ್ಯದ ಕರ್ಫ್ಯೂ ಜಾರಿಯಾದ ಹಿನ್ನೆಲೆ ಶನಿವಾರಸಂತೆ ಮಾರುಕಟ್ಟೆಯಲ್ಲಿ ವಾರದ ಸಂತೆ ಮಧ್ಯಾಹ್ನದವರೆಗೆ ಅರ್ಧ ದಿನ ಮಾತ್ರ ನಡೆಯಿತು.
ಜಿಲ್ಲಾಡಳಿತದ ಆದೇಶ ತಡವಾಗಿ ಜಾರಿಯಾದ ಕಾರಣ ಆದೇಶದ ಅರಿವಿಲ್ಲದ ವ್ಯಾಪಾರಿಗಳು ಬೆಳಿಗ್ಗೆಯೇ ಸಂತೆ ಮಾರುಕಟ್ಟೆಗೆ ಆಗಮಿಸಿ ವ್ಯಾಪಾರ ಆರಂಭಿಸಿದರು. ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ ೨ ಗಂಟೆಯಾಗುತ್ತಿದ್ದAತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಮಾರುಕಟ್ಟೆಗೆ ಆಗಮಿಸಿ ಸಂತೆ ಖಾಲಿ ಮಾಡುವಂತೆ ಸೂಚಿಸಿದರು. ಇದರಿಂದ ವ್ಯಾಪಾರಿಗಳು ಪರದಾಡಿದರು.
ವೃತ ನಿರೀಕ್ಷಕ ಎಸ್. ಪರಶಿವಮೂರ್ತಿ, ಪಿಎಸ್ಐ ಎಚ್.ಈ. ದೇವರಾಜ್, ಸಿಬ್ಬಂದಿ ಇಲಾಖೆ ಜೀಪಿನಲ್ಲಿ ಧ್ವನಿ ವರ್ಧಕದ ಮೂಲಕ ಸರ್ಕಾರದ ಕರ್ಫ್ಯೂ ಆದೇಶ ಜಾರಿಯಾಗಿರುವ ಹಿನ್ನೆಲೆ ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ಬಗ್ಗೆ ಮಾಹಿತಿ ನೀಡಿದರು. ಶನಿವಾರ, ಭಾನುವಾರ ಬೆಳಿಗ್ಗೆ ೫ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟು ತೆರೆದಿರುವ ಬಗ್ಗೆ ಹಾಗೂ ರಾತ್ರಿ ೯ ರಿಂದ ಬೆಳಿಗ್ಗೆ ೫ ರವರೆಗೆ ಕರ್ಫ್ಯೂ ಆದೇಶ ಜಾರಿಯಲ್ಲಿದ್ದು, ಜನ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮ ಪಾಲಿಸುವಂತೆ ಎಚ್ಚರಿಸಿದರು.ಸಿದ್ದಾಪುರ : ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಗತ್ಯವಸ್ತುಗಳ ಅಂಗಡಿಗಳು ತೆರೆದಿದ್ದವು. ಆದರೆ ಬಸ್ ಹಾಗೂ ವಾಹನಗಳ ಸಂಚಾರವಿಲ್ಲದೆ ಪಟ್ಟಣದಲ್ಲಿ ಜನರ ಓಡಾಟ ವಿರಳವಾಗಿತ್ತು. ಬಟ್ಟೆ, ಚಿನ್ನದಂಗಡಿಗಳು, ಇನ್ನಿತರ ಅಂಗಡಿಗಳನ್ನು ಮುಚ್ಚಲಾಗಿತ್ತು. ಒಂದೆರೆಡು ಸರ್ಕಾರಿ ಬಸ್ಗಳು ಸಂಚರಿಸುತ್ತಿತ್ತು. ಆದರೆ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ದೂರದ ಊರಿಗೆ ಹೋಗುವವರು ಬಸ್ ಸಂಚಾರವಿಲ್ಲದೇ ಪರದಾಡಿದರು. ಖಾಸಗಿ ಬಸ್ಗಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಅಮ್ಮತ್ತಿಯಲ್ಲಿ ತೆರೆಯಲಾಗಿರುವ ತಪಾಸಣಾ ಕೇಂದ್ರದಲ್ಲಿ ಕೇರಳದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿತ್ತು. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜು ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಲಸಿಕೆಗೆ ಪರದಾಟ : ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಲಸಿಕೆಯನ್ನು ನೀಡಲಾಗುತ್ತಿತ್ತು. ಆದರೆ ನೂರಾರು ಮಂದಿ ತೋಟ ಕಾರ್ಮಿಕರು ಲಸಿಕೆಗಾಗಿ ಆಗಮಿಸಿದ್ದರು. ಆದರೆ ಲಸಿಕೆ ಸಿಗದೆ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಲಸಿಕೆ ಸಿಗದೇ ಬೆಳಗ್ಗಿನಿಂದ ಕಾದು ನಂತರ ಹಿಂತಿರುಗಿದರು. ತಾವು ಕೆಲಸ ಬಿಟ್ಟು ಲಸಿಕೆಗಾಗಿ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹೊಸ ಆದೇಶದ ಮಾಹಿತಿಯ ಕೊರತೆಯಿಂದ ಗೊಂದಲಕ್ಕೀಡಾದ ಜನತೆ
*ವೀರಾಜಪೇಟೆ: ಕೊಡಗು ಜಿಲ್ಲೆಯಾದ್ಯಂತ ಜಿಲ್ಲಾಡಳಿತದ ಹೊಸ ಲಾಕ್ಡೌನ್ ಆದೇಶಗಳು ತಲುಪದ ಕಾರಣ ಇಂದು ಜನತೆ, ಕಚೇರಿಗಳು, ಪದವಿ ಕಾಲೇಜುಗಳು, ನ್ಯಾಯಾಲಯಗಳು ತೆರೆದಿರುತ್ತವೆಯೋ ಇಲ್ಲವೋ ಎನ್ನುವ ಗೊಂದಲಕ್ಕAತೂ ಈಡಾಗಿದ್ದರು. ಬಸ್ ಸಂಚಾರ ಇರುತ್ತದೆಯೋ ಇಲ್ಲವೋ? ಅಂಗಡಿ ತೆರೆಯಬಹುದಾ? ಇಲ್ಲವಾ ಹೀಗೆ ಅನೇಕ ಪ್ರಶ್ನೆಗಳು ಸಾರ್ವಜನಿಕರನ್ನು, ವರ್ತಕರನ್ನು ಕಾಡಿದ್ದು ಸುಳ್ಳಲ್ಲ. ಆದರೂ ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದಿದ್ದರು.
ವೀರಾಜಪೇಟೆ ನಗರದಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದವು, ತರಕಾರಿ, ಹಣ್ಣಿನಂಗಡಿ, ಮೆಡಿಕಲ್ ಶಾಪ್ ಸಂಪೂರ್ಣ ತೆರೆದು ವ್ಯಾಪಾರ ಮಾಡಿದವು. ಬಟ್ಟೆ ಅಂಗಡಿಗಳು ಅಲ್ಲೊಂದು ಇಲ್ಲೊಂದು ತೆರೆದಿದ್ದವು. ನಗರ ಶೇಕಡ ಎಪ್ಪತ್ತು ಭಾಗ ಬಂದ್ ಸ್ಥಿತಿಯಲ್ಲೇ ಇತ್ತು. ಅಚಾನಕ್ಕಾಗಿ ಘೋಷಣೆಯಾದ ವಾರಾಂತ್ಯದ ಕರ್ಫ್ಯೂ ಬಗ್ಗೆ, ಬದಲಾದ ನಿಯಮಾವಳಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರಥರವಾದ ಚರ್ಚೆಗಳು ನಡೆದವು.
ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರೂ ಬೆಳಗಿನಿಂದಲೇ ಕುಶಾಲನಗರ ಚೆಕ್ಪೋಸ್ಟ್ ಮೂಲಕ ಜಿಲ್ಲೆ ಕಡೆಗೆ ವಾಹನ ಸಂಚಾರ ಎಂದಿನAತೆ ಕಂಡುಬAತು.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಅಂತರರಾಜ್ಯ ವ್ಯಾಪ್ತಿಯ ವಾಹನಗಳು ಸಾಲುಗಟ್ಟಿ ಜಿಲ್ಲೆ ಪ್ರವೇಶಿಸುತ್ತಿದ್ದ ದೃಶ್ಯ ಗಡಿಭಾಗದಲ್ಲಿ ಗೋಚರಿಸಿತು.
ಸರ್ಕಾರದ ಆದೇಶದಂತೆ ಕೊಡಗು ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ನೂತನ ಮಾರ್ಗಸೂಚಿ ಹೊರಡಿಸಿದ್ದರೂ ಈ ಬಗ್ಗೆ ಮಾಹಿತಿ ಕೊರತೆಯಿಂದ ಪ್ರವಾಸಿಗರು ಜಿಲ್ಲೆಯ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಎರಡು ಜಿಲ್ಲೆಗಳ ಸಿಬ್ಬಂದಿಗಳು ಪ್ರತ್ಯೇಕ ತಪಾಸಣಾ ಕೇಂದ್ರದಲ್ಲಿ ಅಂತರರಾಜ್ಯ ವಾಹನಗಳ ತಪಾಸಣೆ ನಡೆಸಿ ದಾಖಲೆಗಳ ಪರಿಶೀಲನೆ ನಂತರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಪ್ರವಾಸಿಕೇಂದ್ರಗಳು ಬಂದ್ ಹಿನ್ನೆಲೆಯಲ್ಲಿ ಪ್ರವಾಸಿಗರು ಗೊಂದಲಕ್ಕೀಡಾದರು. ತಮಿಳುನಾಡು ಮತ್ತು ಆಂಧ್ರಪ್ರದೇಶ ಬೆಂಗಳೂರು ಕಡೆಯಿಂದ ಹೆಚ್ಚಿನ ಸಂಖ್ಯೆಯ ವಾಹನಗಳು ಕುಶಾಲನಗರ ಮೂಲಕ ಜಿಲ್ಲೆಗೆ ಪ್ರವೇಶಿಸುತ್ತಿತ್ತು.
ಕುಶಾಲನಗರ ಪಟ್ಟಣದಲ್ಲಿ ಬೆಳಗ್ಗೆ ೬ ರಿಂದ ಮಧ್ಯಾಹ್ನ ೨ ಗಂಟೆ ತನಕ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟುಗಳು ನಡೆದವು. ವಾರಾಂತ್ಯ ವಹಿವಾಟು ನಿರ್ಬಂಧದ ಬಗ್ಗೆ ಪಟ್ಟಣ ಪಂಚಾಯಿತಿ ವತಿಯಿಂದ ಮೈಕ್ ಮೂಲಕ ಮಾಹಿತಿ ನೀಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಗುತ್ತಿತ್ತು.
ಸರ್ಕಾರಿ ಬಸ್ಗಳ ಓಡಾಟವಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಸರ್ಕಾರಿ ಕಚೇರಿಗಳು ಎಂದಿನAತೆ ಕರ್ತವ್ಯ ನಿರ್ವಹಿಸಿದವು.ಕೂಡಿಗೆ: ಸರ್ಕಾರದ ಅದೇಶದಂತೆ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕೊಡಗಿನ ಗಡಿ ಭಾಗವಾದ ಶಿರಂಗಾಲ ಚೆಕ್ಪೋಸ್ಟ್ನಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಕಟ್ಟುನಿಟ್ಟಿನ ತಪಾಸಣೆಯು ದಿನದ ೨೪ ಗಂಟೆ ನಡೆಸಲಾಗುತ್ತಿದೆ.
ಕೊಡಗಿನ ಗಡಿಭಾಗ ಶಿರಂಗಾಲ ಮತ್ತು ಹಾಸನ ಜಿಲ್ಲೆಯ ರಾಜ್ಯ ಹೆದ್ದಾರಿಯ ಹರಿದ ಹಾಸನ ಜಿಲ್ಲೆಯ ಕಡೆಯಿಂದ ಬರುವ ಎಲ್ಲಾ ವಾಹನಗಳು ಮತ್ತು ಕೇರಳ-ಮಹಾರಾಷ್ಟç ರಾಜ್ಯಗಳಿಂದ ಬರುವ ವಾಹನಗಳ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಯಿತು. ಹೊರ ಜಿಲ್ಲೆಯವರು ಜಿಲ್ಲೆಯಲ್ಲಿ ಉಳಿಯುವುದಾದರೆ ಅವರುಗಳಿಗೆ ಸೀಲ್ ಹಾಕಲಾಗುತ್ತಿತ್ತು. ಅಂತರರಾಜ್ಯ ಪ್ರಯಾಣಿಕರ ನೆಗೆಟಿವ್ ವರದಿಯ ಪರಿಶೀಲನೆಯ ನಂತರ ಪ್ರಯಾಣಿಕರ ವಿವರಗಳನ್ನು ಗೇಟ್ನ ತಪಾಸಣೆಯ ಪುಸ್ತಕದಲ್ಲಿ ದಾಖಲೆ ಮಾಡಲಾಗುತ್ತಿದೆ.
ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗೇಟ್ ಸಮೀಪದಲ್ಲಿ ಜಿಲ್ಲೆಗೆ ಬರುವ ಪ್ರಯಾಣಿಕರ ಗಂಟಲ ದ್ರವ ಪರೀಕ್ಷೆಯನ್ನು ಮಾಡಲಾಗುತ್ತಿತ್ತು. ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಮಧ್ಯಾಹ್ನದ ೨ ಗಂಟೆಯ ನಂತರ ಶಿರಂಗಾಲ ಗೇಟ್ನ ಮೂಲಕ ಯಾವುದೇ ವಾಹನಗಳು ಬರದಂತೆ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಪೊಲೀಸ್ ಮಾಡಿದರು. ತುರ್ತು ಅವಶ್ಯಕತೆ ಇದ್ದಲ್ಲಿ ಮಾತ್ರ ವಾಹನಗಳನ್ನು ಮಾತ್ರ ಬಿಡಲಾಯಿತು.
ತಪಾಸಣೆಯ ಕೇಂದ್ರದಲ್ಲಿ ಕಂದಾಯ ಇಲಾಖೆ, ಪೊಲೀಸ್, ಅರಣ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗೃಹ ರಕ್ಷಕದಳ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆರು ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸೋಮವಾರಪೇಟೆ : ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂಗೆ ಒಗ್ಗಿದ ಸೋಮವಾರಪೇಟೆ, ಮಧ್ಯಾಹ್ನ ೨ಗಂಟೆಯ ನಂತರ ಸ್ತಬ್ಧಗೊಂಡಿತು.
ಬೆಳಿಗ್ಗೆಯೇ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರು ಪಟ್ಟಣದಲ್ಲಿ ಸಂಚರಿಸಿ ವಾರಾಂತ್ಯದ ಕರ್ಫ್ಯೂ ಬಗ್ಗೆ ಮೈಕ್ ಮೂಲಕ ಜಾಗೃತಿ ಮೂಡಿಸಿದರು. ಇದರಿಂದಾಗಿ ಹಲವಷ್ಟು ಅಂಗಡಿಗಳು ಬೆಳಿಗ್ಗೆಯೇ ಮುಚ್ಚಿದವು.
ಪಟ್ಟಣಕ್ಕೆ ವಾಹನಗಳ ಆಗಮನವೂ ಕಡಿಮೆಯಾಗಿತ್ತು. ಮಧ್ಯಾಹ್ನದವರೆಗೆ ಪಟ್ಟಣದಲ್ಲಿ ಒಂದಿಷ್ಟು ವ್ಯಾಪಾರ ವಹಿವಾಟು ನಡೆಯಿತು. ಮಧ್ಯಾಹ್ನ ೨ ಗಂಟೆಗೆ ಹಲವಷ್ಟು ಮಂದಿ ಸ್ವಯಂಪ್ರೇರಣೆಯಿAದ ಅಂಗಡಿಗಳನ್ನು ಮುಚ್ಚಿದರೆ, ಕೆಲವರು ಅಂಗಡಿಗಳನ್ನು ನಿಗದಿತ ಅವಧಿಯಲ್ಲಿ ಮುಚ್ಚದ ಹಿನ್ನೆಲೆ ಮತ್ತೆ ಪೊಲೀಸರು ಎಚ್ಚರಿಕೆ ನೀಡಿದರು.
ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಗಡಿ ಭಾಗದಲ್ಲಿ ಅಂತರ್ಜಿಲ್ಲಾ ವಾಹನಗಳ ಅನಗತ್ಯ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಿದರು. ಕೊಡಗು-ಹಾಸನ ಗಡಿ ಭಾಗವಾದ ಬಾಣಾವರ ಗೇಟ್, ಕೊಡ್ಲಿಪೇಟೆಯ ಶಾಂತಪುರ, ಶನಿವಾರಸಂತೆಯ ಹಿಪ್ಲಿ ಗೇಟ್ ಸೇರಿದಂತೆ ಇನ್ನಿತರ ಗಡಿ ಭಾಗದಲ್ಲಿ ಪೊಲೀಸರನ್ನು ಸೋಮವಾರಪೇಟೆ : ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂಗೆ ಒಗ್ಗಿದ ಸೋಮವಾರಪೇಟೆ, ಮಧ್ಯಾಹ್ನ ೨ಗಂಟೆಯ ನಂತರ ಸ್ತಬ್ಧಗೊಂಡಿತು.
ಬೆಳಿಗ್ಗೆಯೇ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರು ಪಟ್ಟಣದಲ್ಲಿ ಸಂಚರಿಸಿ ವಾರಾಂತ್ಯದ ಕರ್ಫ್ಯೂ ಬಗ್ಗೆ ಮೈಕ್ ಮೂಲಕ ಜಾಗೃತಿ ಮೂಡಿಸಿದರು. ಇದರಿಂದಾಗಿ ಹಲವಷ್ಟು ಅಂಗಡಿಗಳು ಬೆಳಿಗ್ಗೆಯೇ ಮುಚ್ಚಿದವು.
ಪಟ್ಟಣಕ್ಕೆ ವಾಹನಗಳ ಆಗಮನವೂ ಕಡಿಮೆಯಾಗಿತ್ತು. ಮಧ್ಯಾಹ್ನದವರೆಗೆ ಪಟ್ಟಣದಲ್ಲಿ ಒಂದಿಷ್ಟು ವ್ಯಾಪಾರ ವಹಿವಾಟು ನಡೆಯಿತು. ಮಧ್ಯಾಹ್ನ ೨ ಗಂಟೆಗೆ ಹಲವಷ್ಟು ಮಂದಿ ಸ್ವಯಂಪ್ರೇರಣೆಯಿAದ ಅಂಗಡಿಗಳನ್ನು ಮುಚ್ಚಿದರೆ, ಕೆಲವರು ಅಂಗಡಿಗಳನ್ನು ನಿಗದಿತ ಅವಧಿಯಲ್ಲಿ ಮುಚ್ಚದ ಹಿನ್ನೆಲೆ ಮತ್ತೆ ಪೊಲೀಸರು ಎಚ್ಚರಿಕೆ ನೀಡಿದರು.
ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಗಡಿ ಭಾಗದಲ್ಲಿ ಅಂತರ್ಜಿಲ್ಲಾ ವಾಹನಗಳ ಅನಗತ್ಯ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಿದರು. ಕೊಡಗು-ಹಾಸನ ಗಡಿ ಭಾಗವಾದ ಬಾಣಾವರ ಗೇಟ್, ಕೊಡ್ಲಿಪೇಟೆಯ ಶಾಂತಪುರ, ಶನಿವಾರಸಂತೆಯ ಹಿಪ್ಲಿ ಗೇಟ್ ಸೇರಿದಂತೆ ಇನ್ನಿತರ ಗಡಿ ಭಾಗದಲ್ಲಿ ಪೊಲೀಸರನ್ನು *ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಆನೆಚೌಕೂರು ಗಡಿ ಪ್ರದೇಶದಲ್ಲಿ ಪೊಲೀಸರ ಬಿಗಿ ಭದ್ರತೆಯೊಂದಿಗೆ ಕೊಡಗಿಗೆ ಪ್ರವೇಶಿಸುವ ವಾಹನಗಳ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ.
ಶನಿವಾರ ಬೆಳಗ್ಗಿನಿಂದಲೇ ಗಡಿಭಾಗದಲ್ಲಿ ಸುಮಾರು ೧೨ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ತಪಾಸಣೆ ಕಾರ್ಯದಲ್ಲಿ ಮಗ್ನರಾಗಿದ್ದರು. ಕೊಡಗಿಗೆ ಆಗಮಿಸುವ ಖಾಸಗಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಸೂಚನೆಯಂತೆ ಕ್ರಮ ಕೈಗೊಂಡು ಕೊರೊನಾ ಪರೀಕ್ಷೆಗೆ ಒಳಪಡಿಸಿದ ೭೨ ಗಂಟೆಗಳ ಒಳಗಿನ ನೆಗೆಟಿವ್ ವರದಿಯನ್ನು ಪರಿಶೀಲಿಸಿ ನಂತರ ದೃಡೀಕರಣ ಪತ್ರ ಹೊಂದಿದವರಿಗೆ ಕೊಡಗು ಪ್ರವೇಶಕ್ಕೆ ಅನುಮತಿಯನ್ನು ಒದಗಿಸಿಕೊಡಲಾಯಿತು.
ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಅವರ ಮಾರ್ಗದರ್ಶನ, ಗೋಣಿಕೊಪ್ಪ ಠಾಣಾ ಉಪನಿರೀಕ್ಷಕ ಸುಬ್ಬಯ್ಯ ಅವರ ನೇತೃತ್ವದಲ್ಲಿ ಬಿಗಿ ಭದ್ರತೆಯೊಂದಿಗೆ ಕೊಡಗಿಗೆ ಆಗಮಿಸುವ ಪ್ರವಾಸಿಗರನ್ನು ಪರೀಕ್ಷಿಸಿ ಪ್ರವೇಶ ತಡೆಯೊಡ್ಡುವ ಮೂಲಕ ಜಿಲ್ಲೆ ಕೊರೊನಾ ಆತಂಕಕ್ಕೆ ಒಳಗಾಗುವುದನ್ನು ತಗ್ಗಿಸಲು ಪ್ರಯತ್ನ ಸಾಗಿತು. ಗಡಿ ಪ್ರದೇಶ ಜಿಲ್ಲೆಗಳಲ್ಲಿ ಕರ್ಫ್ಯೂ ಮತ್ತು ವೀಕೆಂಡ್ ಲಾ�