ಮಡಿಕೇರಿ, ಆ. ೭: ಮಾನವ ಶರೀರದ ಒಟ್ಟು ೨೦೬ ಮೂಳೆಗಳ ಹೆಸರುಗಳನ್ನು ಕೇವಲ ೩೬ ಸೆಕೆಂಡುಗಳಲ್ಲಿ ಉಚ್ಛರಿಸಿದ ಸಾಧನೆಗೆ ಮಡಿಕೇರಿ ಸಂತ ಜೋಸೆಫರ ಶಾಲೆಯ ೧ನೆ ತರಗತಿಯ ವಿದ್ಯಾರ್ಥಿನಿ ಕೆ.ಎಸ್. ಉನ್ನತಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ಇತ್ತೀಚೆಗಷ್ಟೇ ಆನ್‌ಲೈನ್ ಮೂಲಕ ನಡೆದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿ ಪ್ರಶಸ್ತಿಗೆ ಭಾಜನರಾಗಿದ್ದಾಳೆ.

ಇವಳು ಮಡಿಕೇರಿಯ ಡಾ.ಕೆಂಜನ ಪೂಜ ಹಾಗೂ ಸುಧನ್ವ ದಂಪತಿಯ ಪುತ್ರಿ.