ಮಡಿಕೇರಿ, ಆ. ೮: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಐತಿಹಾಸಿಕವಾದ ದಾಖಲೆ ಎಂಬAತೆ ನಿನ್ನೆ ಚಿನ್ನದ ಪದಕವೊಂದು ಲಭಿಸಿದೆ. ಹರ್ಯಾಣದ ಯುವಕ ನೀರಜ್ ಚೋಪ್ರಾ ಅವರು ಜಾವಲಿನ್ ಎಸೆತದಲ್ಲಿ ಈ ಸಾಧನೆ ಮಾಡಿದ್ದು, ಇಡೀ ಭಾರತ ದೇಶ ಸಂಭ್ರಮದಲ್ಲಿ ಮುಳುಗಿದೆ. ಈ ‘ಚಿನ್ನದ ಹುಡುಗ’ನ ಜತೆ ಕೊಡಗಿನ ಹಲವರ ಸಂಪರ್ಕ ಈ ಹಿಂದೆಯೇ ಆಗಿದ್ದು, ಜಿಲ್ಲೆಯ ಮಂದಿಯ ಸಂತಸವೂ ನೀರಜ್ ಚೋಪ್ರಾ ಒಟ್ಟಿಗೆ ತೆಗೆದಿದ್ದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಶೇರ್’ ಮಾಡುವ ಮೂಲಕ ವ್ಯಕ್ತಗೊಂಡಿದೆ.

ನೀರಜ್ ಭಾರತೀಯ ಸೇನೆಯ ಯೋಧ. ಇವರು ಸೇನೆಯಲ್ಲಿ ಸುಬೇದಾರ್ ಆಗಿದ್ದು, ಇವರ ಯೂನಿಟ್ (ಬೆಟಾಲಿಯನ್) ರಜಪೂತ್ ರೈಫಲ್ಸ್... ಈ ಬೆಟಾಲಿಯನ್ ಮುಖ್ಯಸ್ಥರಾಗಿದ್ದ ಇದೀಗ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿರುವ ಕೊಡಗಿನವರಾದ ಕೋದಂಡ ಕಾರ್ಯಪ್ಪ ದಂಪತಿಯೊಟ್ಟಿಗೆ ರಾಷ್ಟçಪತಿ ಭವನದಲ್ಲಿ ಈ ಹಿಂದೆ ನೀರಜ್ ಇರುವ ಚಿತ್ರ ಹರಿದಾಡುತ್ತಿದೆ. ಇದರೊಂದಿಗೆ ಭಾರತೀಯ ಹಾಕಿ ತಂಡದ ಕೋಚ್ ಆಗಿರುವ ವೀರಾಜಪೇಟೆಯ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರು ಕಳೆದ ಮಾರ್ಚ್ನಲ್ಲಿ ಭುವನೇಶ್ವರದಲ್ಲಿ ನೀರಜ್ ತರಬೇತಿಯಲ್ಲಿದ್ದಾಗ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದರು. ಇವರೂ ಇದೀಗ ಸಂತಸ ಹಂಚಿಕೊAಡಿದ್ದಾರೆ.

ಇನ್ನು ರಾಷ್ಟಿçÃಯ ಚಾಂಪಿಯನ್‌ಶಿಪ್‌ನಲ್ಲಿ ಪಿ.ಟಿ. ಉಷಾ ಅವರ ದಾಖಲೆಯನ್ನು ಮುರಿದು ಹೆಸರು ಮಾಡಿರುವ ಭವಿಷ್ಯದ ಯುವ ಕ್ರೀಡಾ ತಾರೆ ಮಾಜಿ ಒಲಿಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿ ಉನ್ನತಿ ಅಯ್ಯಪ್ಪ ಫೆಡರೇಷನ್ ಕಪ್ ಸಂದರ್ಭ ಪಾಟಿಯಾಲದಲ್ಲಿ ನೀರಜ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಸಂದರ್ಭ ಭೇಟಿಯಾಗಿದ್ದರು. ಉನ್ನತಿಯ ತಂದೆ ರಾಷ್ಟಿçÃಯ ಅಥ್ಲೆಟಿಕ್ ಕೋಚ್ ಬೊಳ್ಳಂಡ ಅಯ್ಯಪ್ಪ ಅವರು ಕೂಡ ನೀರಜ್ ಜತೆ ಸಮಾಲೋಚಿಸಿದ್ದರು. ಪುತ್ರಿಗೂ ಮಾರ್ಗದರ್ಶನ ನೀಡಿದ್ದನ್ನು ಅಯ್ಯಪ್ಪ ಸ್ಮರಿಸಿಕೊಂಡಿದ್ದಾರೆ.

ಇವರೆಲ್ಲರೂ ಒಲಿಂಪಿಕ್ಸ್ನಲ್ಲಿ ನೀರಜ್ ಸಾಧನೆ ಮಾಡುವ ಮೊದಲೇ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಇದೀಗ ನೀರಜ್ ದೇಶದ ‘ಚಿನ್ನದ ಹುಡುಗ’ನಾಗಿ ಐತಿಹ್ಯ ನಿರ್ಮಿಸಿರುವ ಸಾಧನೆ-ಸಂಭ್ರಮವನ್ನು ಜಿಲ್ಲೆಯ ಈ ಮಂದಿಯೂ ಹಂಚಿಕೊAಡಿದ್ದಾರೆ.

ವಿಶೇಷವೆAದರೆ ನೀರಜ್ ಚೋಪ್ರಾ ಹಾಗೂ ಉನ್ನತಿ ಅಯ್ಯಪ್ಪ ಇವರಿಬ್ಬರಿಗೂ ಜಿಂದಾಲ್ ಸ್ಟೀಲ್ ವರ್ಕ್ಸ್ (ಎSW) ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿವೆ.

-ಶಶಿ