ತಾ. ೧೦ರಂದು ಬೃಹತ್ ವಾಹನ ಜಾಥಾ
ಕುಶಾಲನಗರ, ಆ. ೮: ಸಚಿವ ಸ್ಥಾನ ವಂಚಿತ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ರಾಜ್ಯ ಸಂಪುಟದಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಾಯ ಮಾಡುವ ನಿಟ್ಟಿನಲ್ಲಿ ಕುಶಾಲನಗರ ತಾಲೂಕಿನ ರಂಜನ್ ಬೆಂಬಲಿಗರು ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ವಾಹನ ಜಾಥಾ ಹಮ್ಮಿಕೊಂಡಿದ್ದಾರೆ.
ಕುಶಾಲನಗರ ಹೋಬಳಿ ಸೇರಿದಂತೆ ತಾಲೂಕು ಪ್ರಮುಖರು ಭಾನುವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನಿಯೋಗದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊಡಗು ಜಿಲ್ಲೆಯ ಹಿರಿಯ ಶಾಸಕ ರಂಜನ್ ಅವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಒತ್ತಾಯಿಸಲಾಗುವುದು ಎಂದು ಬಿಜೆಪಿ ತಾಲೂಕು ವಕ್ತಾರ ಕೆ.ಜಿ ಮನು ತಿಳಿಸಿದ್ದಾರೆ.
ಅಸಮಾಧಾನ
ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಕುಶಾಲನಗರ ತಾಲೂಕು ಬಿಜೆಪಿ ಘಟಕದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಉಮಾಶಂಕರ್ ತಾಲೂಕು ವಕ್ತಾರ ಕೆ ಜಿ ಮನು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ೫ನೇ ಬಾರಿ ವಿಧಾನಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಹಿರಿಯ ಸದಸ್ಯ ಅಪ್ಪಚ್ಚು ರಂಜನ್ ಅವರ ಹಿರಿತನ ಮತ್ತಿತರ ಮಾನದಂಡಗಳಿಗೆ ಬೆಲೆ ನೀಡದೇ ನಿರ್ಲಕ್ಷö್ಯ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಯವರ್ಧನ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಎA. ಚರಣ್, ಪಂಚಾಯ್ತಿ ಸದಸ್ಯ ಬಿ. ಅಮೃತರಾಜ್, ಮಾಜಿ ಜಿ.ಪಂ. ಸದಸ್ಯೆ ಮಂಜುಳಾ ಮತ್ತಿತರರು ಇದ್ದರು.
ಶಾಸಕರಾದ ಅಪ್ಪಚ್ಚು ರಂಜನ್ ಅವರಿಗೆ ಮಂತ್ರಿಸ್ಥಾನ ನೀಡಬೇಕೆಂದು ಒತ್ತಾಯಿಸಿ ನಡೆಯಲಿರುವ 'ಬೆಂಗಳೂರು ಚಲೋ' ಕಾರ್ಯಕ್ರಮಕ್ಕೆ ಮಡಿಕೇರಿ ನಗರ ಮಂಡಲ ವತಿಯಿಂದ ಬೆಂಬಲವನ್ನು ಸೂಚಿಸಿ ನಗರದಿಂದ ಅಂದಾಜು ೨೫ ವಾಹನಗಳಲ್ಲಿ ಬೆಂಬಲಿಗರೊAದಿಗೆ ಬೆಂಗಳೂರಿಗೆ ತೆರಳುವುದಾಗಿ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ತಿಳಿಸಿದ್ದಾರೆ.