ಕಣಿವೆ, ಆ. ೮: ಕೊಡಗಿನ ಜನರ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ "ಕಕ್ಕಡ ಆಟಿ ೧೮" ಆಚರಣೆಯನ್ನು ಕುಶಾಲನಗರದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಸದಸ್ಯರು ಸಡಗರ ಸಂಭ್ರಮಗಳಿAದ ಆಚರಿಸಿದರು.
ಕಳೆದ ೧೧ ವರ್ಷಗಳಿಂದ ಸಾಮೂಹಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಟಿ ಹಬ್ಬದ ಅಂಗವಾಗಿ ತಮ್ಮ ತಮ್ಮ ಮನೆಗಳಲ್ಲಿ ಆಟಿ ಸೊಪ್ಪಿನಿಂದ ವಿಶೇಷವಾಗಿ ಸಿದ್ದಪಡಿಸಿದ ಬಗೆ ಬಗೆಯ ಖಾದ್ಯಗಳನ್ನು ತಂದು ಪ್ರದರ್ಶನಕ್ಕಿಟ್ಟ ಮಹಿಳೆಯರು ಪರಸ್ಪರ ಹಬ್ಬದ ಕಣಿವೆ, ಆ. ೮: ಕೊಡಗಿನ ಜನರ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ "ಕಕ್ಕಡ ಆಟಿ ೧೮" ಆಚರಣೆಯನ್ನು ಕುಶಾಲನಗರದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಸದಸ್ಯರು ಸಡಗರ ಸಂಭ್ರಮಗಳಿAದ ಆಚರಿಸಿದರು.
ಕಳೆದ ೧೧ ವರ್ಷಗಳಿಂದ ಸಾಮೂಹಿಕವಾಗಿ ಆಚರಿಸಿಕೊಂಡು ಬರುತ್ತಿರುವ ಈ ಆಟಿ ಹಬ್ಬದ ಅಂಗವಾಗಿ ತಮ್ಮ ತಮ್ಮ ಮನೆಗಳಲ್ಲಿ ಆಟಿ ಸೊಪ್ಪಿನಿಂದ ವಿಶೇಷವಾಗಿ ಸಿದ್ದಪಡಿಸಿದ ಬಗೆ ಬಗೆಯ ಖಾದ್ಯಗಳನ್ನು ತಂದು ಪ್ರದರ್ಶನಕ್ಕಿಟ್ಟ ಮಹಿಳೆಯರು ಪರಸ್ಪರ ಹಬ್ಬದ ಅಚ್ಚಾಂಡಿರ ಲತಾ ಮಾತನಾಡಿ, ಆಟಿ ತಿಂಗಳ ೧೮ನೇ ದಿನದಲ್ಲಿ ದೊರಕುವ ಆಟಿ ಸೊಪ್ಪಿನಲ್ಲಿ ಹಲವಾರು ಔಷಧೀಯ ಗುಣಗಳಿರುವ ಬಗ್ಗೆ ಹಿರಿಯರು ಹೇಳಿದ್ದಾರೆ. ಹಾಗಾಗಿ ಇಡೀ ಕೊಡಗು ಈ ದಿನವನ್ನು ಆಟಿ ದಿನವಾಗಿ ಆಚರಿಸುತ್ತದೆ. ಮಳೆ ಗಾಲದಲ್ಲಿ ದೇಹದ ಉಷ್ಣಾಂಶವನ್ನು ಹೆಚ್ವಿಸಿ ಚಳಿಯಿಂದ ರಕ್ಷಿಸುವುದು ಈ ಸೊಪ್ಪಿನಿಂದ ಸಿದ್ಧಪಡಿಸುವ ಖಾದ್ಯಗಳ ಉದ್ದೇಶವಾಗಿದೆ. ಹಾಗಾಗಿ ನಮ್ಮ ಸಂಘದ ಮಹಿಳೆಯರು ಈ ದಿನಕ್ಕಾಗಿ ವಿಶೇಷವಾಗಿ ಕಾಯುತ್ತಿರುತ್ತೇವೆ ಎಂದರು.
ಒಕ್ಕೂಟದ ಮಾಜಿ ಅಧ್ಯಕ್ಷೆ ಪಟ್ಟಂದಿ ಬೀನಾ ಸೀತಾರಾಂ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ಸವಿಯುವ ಎಲ್ಲಾ ಆಹಾರಗಳಲ್ಲಿ ಪೌಷ್ಟಿಕಾಂಶಗಳು ಯಥೇಚ್ಛವಾಗಿದ್ದರಿಂದ ಹಿರಿಯರು ಗಟ್ಟಿಮುಟ್ಟಾದ ದೇಹವನ್ನು ಹೊಂದುವ ಮೂಲಕ ಆರೋಗ್ಯವಾಗಿದ್ದರು. ಆದರೆ ಆಧುನಿಕತೆಯಿಂದಾಗಿ ಬದಲಾದ ಅಲಂಕಾರಿಕ ತಿನಿಸುಗಳ ಬಳಕೆಯಿಂದಾಗಿ ಕಲಬೆರಕೆ ಹಾಗೂ ರಸಾಯನಿಕ ಬಳಕೆ ಹೆಚ್ಚಾಗಿ ಅಪೌಷ್ಟಿಕತೆ ಕಾಡುತ್ತಿರುವ ಕಾರಣ ಆಟಿ ೧೮ರ ದಿನವಾದರೂ ಆಟಿ ಸೊಪ್ಪಿನ ಖಾದ್ಯಗಳನ್ನು ಹೆಚ್ಚಾಗಿ ಸವಿದು ಉತ್ತಮ ಆರೋಗ್ಯ ಹೊಂದುವ ಮೂಲ ಉದ್ದೇಶದೊಂದಿಗೆ ಮಹಿಳೆಯರು ಸಾಮೂಹಿಕವಾಗಿ ಆಟಿ ಆಚರಣೆ ಮಾಡುತ್ತಿದ್ದೇವೆ ಎಂದರು. ಗೌಡ ಸಮಾಜದಲ್ಲಿ ಹಮ್ಮಿಕೊಂಡಿದ್ದ ಆಚರಣೆಯಲ್ಲಿ ಶಾಂತಿ, ಬೀನಾ, ಮಾಲತಿ, ಉಷಾ, ಬೇಬಿ, ಜ್ಯೋತಿ, ಸುಶೀಲ ಮೊದಲಾದವರಿದ್ದರು. ಬೀನಾ ಸೀತಾರಾಂ ಪ್ರಾರ್ಥಿಸಿದರೆ, ಗುಡ್ಡನ ಮೀನಾಕ್ಷಿ ಸ್ವಾಗತಿಸಿದರು. ರಮಾ ಮಾದಪ್ಪ ವಂದಿಸಿದರು.