ಶನಿವಾರಸಂತೆೆ, ಆ. ೮: ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಪಂಚಾಯಿತಿ ಕಚೆÉÃರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಪೂರ್ಣಿಮ ಕಿರಣ್ ವಹಿಸಿ ಮಾತನಾಡಿದರು.
ಪಂಚಾಯಿತಿ ಅಂಗಡಿ ಮಳಿಗೆಗಳು ಸೇರಿದಂತೆ ಇತರ ಬಾಬ್ತುಗಳಿಂದ ಸುಮಾರು ರೂ. ೮ ಲಕ್ಷ ವಸೂಲಾತಿಗೆ ಇದ್ದು, ವಸೂಲಾತಿಯ ಬಗ್ಗೆ ಪಿಡಿಓ ಅವರನ್ನು ಪ್ರಶ್ನಿಸಲಾಗಿತ್ತು. ಈಗ ಕೋವಿಡ್ -೧೯ ರ ಸಮಯವಾಗಿದ್ದು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಆಗಾಗ್ಗೆ ಸಭೆ ಕರೆಯುತ್ತಾರೆ. ಸಭೆಗಳಿಗೆ ಹೋಗಬೇಕಾಗಿರುವುದರಿಂದ ವಸೂಲಾತಿ ವಿಳಂಬವಾಗಿದೆ ಎಂದು ಅವರು ಉತ್ತರಿಸಿದರು
ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ ಕಸವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಸರಕಾರದಿಂದ ರೂ ೯,೪೭,೦೦೦ ಪಂಚಾಯಿತಿ ಖಾತೆಗೆ ಬಂದಿದ್ದರೂ, ಪಂಚಾಯಿತಿಯ ಗಮನಕ್ಕೆ ಬಾರದೆ ಪೂರ್ತಿ ಹಣವನ್ನು ಜಿಲ್ಲಾ ಕಾರ್ಯ ಪಾಲಕ ಅಭಿಯಂತರÀ ಮಡಿಕೇರಿ ಇವರಿಗೆ ವರ್ಗಾವಣೆಯಾಗಿದೆ ಜಿಲ್ಲಾ ಆಡಳಿತದಿಂದಲೇ ಕಸ ಘಟಕದ ಕಾಮಗಾರಿ ವಿಳಂಬವಾಗುತ್ತಿದೆ. ಮತ್ತು ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಆಕ್ಷೇಪಿಸಿದರು. ರೂ. ೨೯,೦೦೦ ಬೆಲೆಯ ಕಸದ ಬುಟ್ಟಿಗಳನ್ನು ವಿತರಣೆ ಮಾಡಲಾಗಿದೆ ಕಸ ಸಾಗಾಣಿಕೆ ಮಾಡಲು ಒಂದು ಟಾಟಾ ಎಸಿ ವಾಹನ ಹಾಗೂ ಚಾಲಕನನ್ನು ನೇಮಿಸಲಾಗಿದೆ. ಆದರೂ ಕಸ ಕೊಳೆಯುತ್ತಿದೆ ಜನ ಶಾಪ ಹಾಕುತ್ತಿದ್ದಾರೆ ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ಪಂಚಾಯಿತಿ ಅಧಿ ನಿಯಮ ಪ್ರಕರಣ ೬೧ ಪ್ರಕಾರ ಸ್ಥಾಯಿ ಸಮಿತಿ ರಚನೆಯಾಗಿದ್ದು, ಸಮಿತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೊಟೇಶನ್ ನಿಯಮವನ್ನು ತೆಗೆದುಕೊಳ್ಳದೆ ಪಂಚಾಯಿತಿ ಕಾಮಗಾರಿ ಹಾಗೂ ಬೀದಿ ದೀಪ ಅಳವಡಿಸುವಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಈ ಪಂಚಾಯಿತಿಗೆ ಒಬ್ಬ ಕಾರ್ಯದರ್ಶಿಯವರನ್ನು ನೇಮಕ ಮಾಡಲು ಜಿಲ್ಲಾ ಪಂಚಾಯಿತಿಯನ್ನು ಕೇಳಿಕೊಳ್ಳುವಂತೆ ಸದಸ್ಯರುಗಳು ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಎಸ್.ಸಿ. ನಿತಿನ್, ಸದಸ್ಯರುಗಳಾದ ಕೆ.ಎಸ್. ಜಾನಕಿ, ನಂದಿನಿ, ನಾಗರತ್ನ, ಎಸ್.ಪಿ. ಭಾಗ್ಯ, ಪಿ.ಹೆಚ್. ಗೋಪಿಕ, ಸತ್ಯವತಿ, ಹೆಚ್.ಆರ್. ಭವಾನಿ, ಎಸ್.ಸಿ. ಕಾಂತರಾಜ್, ಬಿ.ಎಸ್. ಮಹಂತೇಶ್, ಎಂ.ಡಿ. ದೇವರಾಜ್, ಸಿ.ಜೆ. ಗಿರೀಶ್, ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಪಿ. ವೇಣುಗೋಪಾಲ್ ಸ್ವಾಗತಿಸಿ ವಂದಿಸಿದರು