ಮಡಿಕೇರಿ, ಆ. ೮: ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಸಲಹಾ ಸಮಿತಿಯನ್ನು ಪುನರ್ ರಚಿಸಲಾಗಿದೆ.
ಮಂಗಳೂರು ವಿ.ವಿ. ಕುಲಪತಿ ಗಳು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಕುಲ ಸಚಿವರು ಸದಸ್ಯರು, ಹಣಕಾಸು ಅಧಿಕಾರಿ ಖಾಯಂ ಆಹ್ವಾನಿತರಾಗಿದ್ದಾರೆ.
ಸಲಹಾ ಸಮಿತಿಯ ಸದಸ್ಯರಾಗಿ ಹಿರಿಯ ಸಾಹಿತಿ ನಾಗೇಶ್ ಕಾಲೂರು, ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಕಾವೇರಿ ಪ್ರಕಾಶ್, ಮಂಗಳೂರು ಬಾರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಮೂಲತಃ ಕೊಡಗು ಜಿಲ್ಲೆಯ ಎಸ್.ಪಿ. ಚಂಗಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಡಾ. ಪಾರ್ವತಿ ಅಪ್ಪಯ್ಯ, ಅರವತೊಕ್ಲು ಗ್ರಾಮದ ತಳೂರು ಕಿಶೋರ್ ಕುಮಾರ್, ಸದಸ್ಯ ಕಾರ್ಯದರ್ಶಿಯಾಗಿ ಡಾ. ಮೀನಾಕ್ಷಿ ಎಂ.ಎA ನೇಮಕಗೊಂಡಿದ್ದಾರೆ.