ಸುAಟಿಕೊಪ್ಪ, ಆ. ೮: ವಿದ್ಯುತ್ ಪ್ರಸಾರಣ ನಿಗಮವನ್ನು ವಿದ್ಯುತ್ ದೇಶವ್ಯಾಪಿ ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಸಜ್ಜಾಗಿದ್ದು ಇದನ್ನು ವಿರೋಧಿಸಿ ತಾ. ೧೦ ರಂದು ದೇಶಾದ್ಯಂತ ನಡೆಯಲಿರುವ ಪ್ರತಿಭಟನೆೆಗೆ ಸಂಬAಧಿಸಿದAತೆ ಸಂಘಟನೆಯ ವತಿಯಿಂದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಸುಂಟಿಕೊಪ್ಪ, ಚೆಟ್ಟಳ್ಳಿ ಹಾಗೂ ಮಾದಾಪುರ ವಿಭಾಗದ ಚೆಸ್ಕಾಂ ಸಿಬ್ಬಂದಿಗಳು ಸುಂಟಿಕೊಪ್ಪ ಚೆಸ್ಕಾಂ ಕಚೇರಿಯಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ನಿಗಮದ ಪ್ರಾಥಮಿಕ ಸಮಿತಿ ಕಾರ್ಯದರ್ಶಿ ಲವಕುಮಾರ್ ಅವರುÀ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರವು ವಿದÀÄ್ಯತ್ ವಲಯವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸೂಕ್ತವಲ್ಲ; ಸಿಬ್ಬಂದಿಗಳ ಬದುಕು ಶೋಚನೀಯಗೊಳ್ಳಲಿದೆ. ಗ್ರಾಹಕರು ಬಳಸುವ ವಿದ್ಯುತ್ ದುಬಾರಿ ಯಾಗಲಿದೆ. ಕೃಷಿಕರಿಗೆ ಬಹಳಷ್ಟು ಸಮಸ್ಯೆಗಳು ಉಂಟಾಗಲಿದೆ. ನೌಕರರಿಗೆ ಭತ್ಯೆ ಮತ್ತು ಕರ್ತವ್ಯ ನಿರ್ವಹಿಸುವ ಸಂದÀರ್ಭ ಅಪಘಾತ ಸಂಭವಿಸಿದರೆ ಪರಿಹಾರಕ್ಕೂ ಕುತ್ತು ಬರುವ ಸಾಧ್ಯತೆ ಇದೆ ಎಂದರು. ರಾಷ್ಟಿçÃಯ ಸಂಘ ತಾ. ೧೦ ರಂದು ವಿದ್ಯುತ್ ಸ್ಥಗಿತಗೊಳಿಸಿ ನಡೆಸುವ ಪ್ರತಿಭಟನೆಗೆ ಬೆಂಬಲ ನೀಡಲು ನಿರ್ಧಾರ ಕೈಗೊಳ್ಳಲಾಯಿತು.

ಈ ಸಂದರ್ಭ ನಿರ್ದೆಶಕ ಎಂ.ಎA. ಶಿವಕುಮಾರ್, ಆರ್. ನಾಗರಾಜ್, ಮಾದಾಪುರ, ಚೆಟ್ಟಳ್ಳಿ, ಸುಂಟಿಕೊಪ್ಪ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಿಬ್ಬಂದಿಗಳು ಈ ಸಭೆಯಲ್ಲಿ ಪಾಲ್ಗೋಂಡಿದ್ದರು.