ನಾಪೋಕ್ಲು, ಆ. ೮: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬAಧಿಸಿ ದಂತೆ, ಅಂಗಡಿ ವರ್ತಕರು ಮತ್ತು ಸಾರ್ವಜನಿಕರು ಹಸಿಕಸ ಮತ್ತು ಒಣಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಹಾಗೂ ಕಸದ ತೊಟ್ಟಿಗಳಲ್ಲಿ ಹಾಕುವಂತಿಲ್ಲ. ಪ್ರತ್ಯೇಕವಾಗಿ ಪಂಚಾಯಿತಿ ವಾಹನಕ್ಕೆ ನೀಡವುದು ಎಂದು ಹೇಳಿದ್ದಾರೆ.
ಕಸ ವಿಲೇವಾರಿಗೆ ಸ್ಥಳದ ಸಮಸ್ಯೆ ಹೆಚ್ಚಾಗಿದೆ. ಪ್ರಸ್ತುತ ಇರುವ ಘಟಕದಲ್ಲಿ ಹಸಿಕಸ, ಒಣಕಸ ವಿಂಗಡನೆಯಾದಲ್ಲಿ ಮಾತ್ರ ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯ. ಪಟ್ಟಣದಲ್ಲಿ ಇರಿಸಲಾದ ಎಲ್ಲಾ ಕಸದ ತೊಟ್ಟಿಯನ್ನು ಪಂಚಾಯಿತಿ ವತಿಯಿಂದ ತೆರವುಗೊಳಿಸ ಲಾಗುವದು ಎಂದು ಮಾಹಿತಿ ನೀಡಿದ್ದಾರೆ.