ಬಾಳೆಲೆ, ಆ. ೮: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆ ತುಸು ಹೆಚ್ಚಾಗಿದ್ದು, ಇದೀಗ ಕ್ಷೀಣಗೊಂಡAತೆ ಕಂಡುಬAದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಲವು ದಿನಗಳ ಬಳಿಕ ಇಂದು ಸೂರ್ಯನ ಕಿರಣಗಳು ಗೋಚರಿಸಿದವು. ದಕ್ಷಿಣ ಕೊಡಗಿನ ಬಾಳೆಲೆ ವಿಭಾಗದಲ್ಲಿ ಮಳೆಗಾಲದ ಸಂದರ್ಭ ಲಕ್ಷö್ಮಣತೀರ್ಥ ನದಿ ಉಕ್ಕಿ ಹರಿಯುವುದರಿಂದ ಇಲ್ಲಿನ ಹಲವೆಡೆ ಗದ್ದೆಗಳು ಜಲಾವೃತಗೊಳ್ಳುತ್ತವೆ. ಇದೀಗ ಮಳೆ ಇಳಿಮುಖಗೊಂಡಿದ್ದು, ಬಾಕಿ ಇರುವ ನಾಟಿ ಕೆಲಸವನ್ನು ಪೂರೈಸುವತ್ತ ರೈತರು ಮುಂದಾಗಿದ್ದಾರೆ. ಆದರೆ, ಈ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಜನರು ಮಳೆಯ ನಿರೀಕ್ಷೆಯಲ್ಲೂ ಇದ್ದಾರೆ. ಲಾಕ್‌ಡೌನ್ ಕಾರಣದಿಂದ ಮಕ್ಕಳೂ ಉತ್ಸಾಹದಿಂದ ನಾಟಿ ಕೆಲಸದಲ್ಲಿ ಹಿರಿಯರೊಂದಿಗೆ ತೊಡಗಿಸಿಕೊಂಡಿದ್ದು ಕಂಡುಬAತು.