ಸುಂಟಿಕೊಪ್ಪ,ಆ. ೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜರಾಜೇಶ್ವರಿ ಸ್ವ ಸಹಾಯ ಸಂಘದ ೧೩ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ರಾಜರಾಜೇಶ್ವರಿ ಸ್ವಸಹಾಯ ಸಂಘದ ೧೩ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಯೋಜನೆಯ ಮೇಲ್ವಿಚಾರಕಿಯಾದ ಪುಷ್ಪಲತಾ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘಗಳಲ್ಲಿ ಸೇರ್ಪಡೆಗೊಳ್ಳುವುದರಿಂದ ಮಹಿಳೆಯರು ವೈಯಕ್ತಿಕ ಬೆಳವಣಿಗೆ ಸ್ವಾಲಂಬನೆ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಪ್ರತಿನಿಧಿ ಮೀನಾಕ್ಷಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಒಕ್ಕೂಟದ ನಾಗರತ್ನ, ಸೇವಾಪ್ರತಿನಿಧಿ ಜ್ಯೋತಿ ಲಕ್ಷಿö್ಮ ಉಪಸ್ಥಿತರಿದ್ದರು. ಈ ಸಂದರ್ಭ ಸಂಘದ ಸದಸ್ಯರುಗಳಾದ ರತ್ನಾ, ಉಮೈಬಾ, ಸುಮ, ಜಯಲಕ್ಷಿö್ಮ, ಮರಿಯ ಮೈಮುನಾ ಇದ್ದರು. ಕೇಕ್ ಕತ್ತರಿಸಿ ೧೩ನೇ ವರ್ಷವನ್ನು ಸಂಭ್ರಮಿಸಿದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಭವ್ಯ ಸ್ವಾಗತಿಸಿ, ಬಿ.ಬಿ.ವೀಣಾ ನಾರಾಯಣ್ ನಿರೂಪಿಸಿ, ಮಾಲಿನಿ ವರದಿ ವಾಚಿಸಿ, ಭವಾನಿ ವಂದಿಸಿದರು.